ತನ್ನ ಮೇಲೆ ಲಾರಿ ಚಾಲಕ ಅಶ್ಲೀಲ ಪದಗಳಿಂದ ನಿಂದಿಸಿ ದೈಹಿಕ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಆದಂ ಪಾಷಾ ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಚುರುಕುಗೊಳಿಸಿದಾಗ ಬಯಲಾಯ್ತು ಆದಂ ಪಾಷಾನ ನಕಲಿ ಆಟ, ಸುಳ್ಳು ಪ್ರಕರಣ ದಾಖಲಿಸಿದ ಆದಂ ಪಾಷಾ ವಿರುದ್ಧ ಇದೀಗ ಪೊಲೀಸರು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.
ಫೆ.17 ರಂದು ದೂರು ನೀಡಿದ್ದ ಪ್ರಕರಣವದು,ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯ ವ್ಯಾಲಂಕೇಣಿ ಬ್ರಿಡ್ಜ್ ಬಳಿ ವಾಟರ್ ಟ್ಯಾಂಕ್ ಲಾರಿ ಸ್ಪೀಡ್ ಆಗಿ ಬರುತ್ತಿದ್ದದ್ದನ್ನು ಪ್ರಶ್ನಿಸಿದಕ್ಕೆ ಚಾಲಕ ತನಗೆ ಹಲ್ಲೆ ಮಾಡಿದ್ದಾಗಿ ಆದಂ ಪಾಷಾ ದೂರು ನೀಡಿದ್ದರು.ಎಫ್ಐಆರ್ ದಾಖಲಿಸುವ ವೇಳೆ ಆದಂ ಪಾಷಾ ರಾಂಗ್ ನಂಬರ್ ಕೊಟ್ಟಿದ್ದಾರೆ.
ತನಿಖೆ ವೇಳೆ ಆದಂ ಪಾಷಾ ಸುಳ್ಳು ದೂರು ಕೊಟ್ಟಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆದಂ ಪಾಷಾನ ಸುಳ್ಳಾಟಗಳು ಬಟಾ ಬಯಲಾಗಿದೆ. ತನ್ನ ಬಟ್ಟೆಗಳನ್ನ ತಾನೇ ಹರಿದುಕೊಂಡು ಬಂದು ದೂರು ಕೊಟ್ಟಿರುವುದು ತಿಳಿದುಬಂದಿದೆ. ಈಗಾಗಲೇ ಸಿಸಿಟಿವಿಯ ವಿಡಿಯೊಗಳನ್ನ ಪೋಲೀಸರು ಪರಿಶೀಲನೆ ನಡೆಸಿ ಆರೋಪಿ ಬಂಧನಕ್ಕೆ ಬಲೇ ಬೀಸಿದ್ದಾರೆ ಒಟ್ಟಾರೆ ಮಾಜಿ ಬಿಗ್ ಬಾಸ್ ಸ್ಪರ್ಧಿಗೆ ಬಂಧನದ ಭೀತಿ ಎದುರಾಗಿದೆ.