ರಾಜಕೀಯರಾಜ್ಯಶಿಕ್ಷಣಸುದ್ದಿ

ಅತಿಥಿ ಉಪನ್ಯಾಸಕರ ಜತೆ ಸಂಧಾನ ವಿಫಲ; ಮುಂದುವರೆದ ಧರಣಿ

ಬೆಂಗಳೂರು; ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆ ಈಡೇರಿಸವಂತೆ 37 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ವೇತನದಲ್ಲಿ 5 ಸಾವಿರ ಹೆಚ್ಚಳ ಹಾಗೂ ಉಪನ್ಯಾಸಕರ ಪರವಾಗಿ 4 ನಿರ್ಧಾರಗಳನ್ನು ತೆಗೆದುಕೊಂಡಿದೆ. ಆದರೆ ‘ಸೇವೆ ಕಾಯಂ’ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಅದರ ನಡುವೆ ಅತಿಥಿ ಉಪನ್ಯಾಸಕರು ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ಹೊರಡಿಸಿದೆ. ಒಂದು ವೇಳೆ ಕರ್ತವ್ಯಕ್ಕೆ ಹಾಜಾರಾಗದಿದ್ದರೇ ಹೊಸಬರನ್ನು ಅತಿಥಿ ಉಪನ್ಯಾಸಕರನಾಗಿ ಸೇರಿಸಿಕೊಳ್ಳುವುದು ಎಂದು ಸರ್ಕಾರ ಖಡಕ್ ಎಚ್ಚರಿಕೆ ಕೊಟ್ಟಿದೆ.

ಇದೀಗ ಸರ್ಕಾರದ ನಿರ್ಧಾರಕ್ಕೆ ಅತಿಥಿ ಉಪನ್ಯಾಸಕರು ವೇತನ ಹೆಚ್ಚಳ ಸೇರಿ ಬೇರೆ ಯಾವ ಸೌಲಭ್ಯವೂ ಬೇಡ. ‘ಕಾಯಂ ಸೇವೆ’ ಒಂದು ನಮ್ಮ ಬೇಡಿಕೆ ಅದನ್ನು ಈಡೇರಿಸುದಾರೆ ಈಡೇಸಿ ಎಂದು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಆದರೆ . ‘ಕಾಯಂ ಸೇವೆ’ ಬೇಡಿಕೆ ಈಡೇರಿಸುವ ತನಕ ಮುಷ್ಕರದಿಂದ ಹಿಂದೆ ಸರಿಯುವ ಮಾತೆ ಇಲ್ಲ ಎಂದಿದ್ದಾರೆ. ಸರ್ಕಾರ ವಿರುದ್ಧ ಜ.1ರಂದು ತುಮಕೂರಿನಿಂದ ಬೆಂಗಳೂರಿಗೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.

ಸರ್ಕಾರದ 4 ಕೊಡುಗೆ ಒಪ್ಪದ ಉಪನ್ಯಾಸಕರು
1 2024ರ ಜನವರಿ ತಿಂಗಳಿಂದಲೇ 5000 ರು. ವೇತನ ಹೆಚ್ಚಳ
2 ವಾರ್ಷಿಕ 5 ಲಕ್ಷ ರುಪಾಯಿಗಳ ಆರೋಗ್ಯ ವಿಮೆ ಸೌಲಭ್ಯ
ಕನಿಷ್ಠ 10 ವರ್ಷ ಸೇವೆ ಮಾಡಿರುವ 3 ವರಿಗೆ ವರ್ಷಕ್ಕೆ 50 ಸಾವಿರ ರು.ನಂತೆ 5 ಲಕ್ಷ ರು. ನಿಧಿ: ನಿವೃತ್ತಿ ಬಳಿಕ ಪಾವತಿ
ನಿತ್ಯ 15 ಗಂಟೆ ಕಾರ್ಯಭಾರ – ನಿಗಂಟೆ ಕಾರ್ಯಭಾರ ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ.

Comments (0)

Your email address will not be published. Required fields are marked *

Back to top button