


ಇರಾನ್ನ ವಿಶ್ವವಿದ್ಯಾನಿಲಯ ಕ್ಯಾಂಪಸ್ನಲ್ಲಿ ಹುಡುಗಿಯೊಬ್ಬಳು ಒಳ ಉಡುಪಿನಲ್ಲಿ ತಿರುಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಕೇವಲ ಇರಾನ್ನಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ದೊಡ್ಡ ಸುದ್ದಿ ಆಯಿತು. ಇದೀಗ ಸಾಮಾಜಿಕ ತಾಣಗಳಲ್ಲಿ ಕೆಲ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಒಳ ಉಡುಪುಗಳಲ್ಲಿ ತಿರುಗಾಡಿದ್ದಕ್ಕಾಗಿ ಇರಾನ್ ಪೊಲೀಸರು ಈ ಹುಡುಗಿಯನ್ನು ಕೊಂದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ದೀಪಕ್ ಶರ್ಮಾ ಎಂಬ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡು, ‘‘ಸರ್ಕಾರದ ಪ್ರಕಾರ ಬಟ್ಟೆ ಧರಿಸದ ಕಾರಣ ಇರಾನ್ ಪೊಲೀಸರು ಈ ಹುಡುಗಿಯನ್ನು ಕೊಂದಿದ್ದಾರೆ, ಇದು ಎಂತಹ ಕೊಲೆಗಾರ ಧಾರ್ಮಿಕ ವ್ಯವಸ್ಥೆ.’’ ಎಂದು ಬರೆದುಕೊಂಡಿದ್ದಾರೆ.
‘‘ಇರಾನಿನ ನೈತಿಕತೆಯ ಪೊಲೀಸರು #ಹಿಜಾಬ್ ಧರಿಸದಿದ್ದಕ್ಕಾಗಿ ಮಹಿಳೆಯ ಒಳಉಡುಪುಗಳನ್ನು ಕಿತ್ತೆಸೆದಿದ್ದಾರೆ. ಬಳಿಕ ಆಕೆಯನ್ನು ಥಳಿಸಿ ಬಂಧಿಸಿದ್ದಾರೆ. ಅಂದಿನಿಂದ ಅವಳು ಇಲ್ಲ.’’ ಎಂದು ಹೇಳಿಕೊಂಡಿದ್ದಾರೆ.
ಆಗ ನಮಗೆ ಹಲವು ಮಾಧ್ಯಮ ವರದಿಗಳು ಸಿಕ್ಕಿವೆ. ಇರಾನ್ನಲ್ಲಿ ಈ ಘಟನೆ ವರದಿಯಾಗಿದೆ. ಮಹಿಳೆಯನ್ನು ಬಂಧಿಸಲಾಗಿದೆ. ಈ ವರದಿಯಲ್ಲಿ ಮಾನವ ಹಕ್ಕುಗಳ ಸಂಘಟನೆಯಾದ ಅಮ್ನೆಸ್ಟಿಯನ್ನು ಉಲ್ಲೇಖಿಸಿ, ಬಂಧಿತ ಮಹಿಳೆಯ ಬಿಡುಗಡೆಯ ಬೇಡಿಕೆಯನ್ನೂ ಪ್ರಕಟಿಸಲಾಗಿದೆ. ಆದರೆ, ಕೊಲೆಗೈದ ಬಗ್ಗೆ ಎಲ್ಲಯೂ ಉಲ್ಲೇಖವಿಲ್ಲ.