ಬಿಗ್ ಬಾಸ್ ಕನ್ನಡ ಸೀಸನ್ 10 ರ ಖ್ಯಾತಿಯ ಡ್ರೋನ್ ಪ್ರತಾಪ್ ನ ಹುಟ್ಟುಹಬ್ಬ ಜೂನ್ 10 ರಂದು ಇದ್ದು, ಅಂದು ಪ್ರತಾಪ್ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದಾರೆ.. ಬಡ ಜನರಿಗೆ ಕಣ್ಣಿನ ಶಾಸ್ತ್ರ ಚಿಕಿತ್ಸೆಗೆ ನೆರವಾಗಲು ಪ್ರತಾಪ್ ನಿರ್ಧರಿಸಿದ್ದಾರೆ. ಈ ಕುರಿತ ವಿಡಿಯೋ ಬಂದನು ಪ್ರತಾಪ್ ಹಂಚಿಕೊಂಡಿದ್ದಾರೆ..
” ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ಡಾಕ್ಟರ್ ರಾಜಕುಮಾರ್ ಸರ್ ಹೇಳ್ತಾರೆ ನೇತ್ರದಾನ ಮಹಾದಾನ ಅಂತ, ಮುಂಬರುವ ಜೂನ್ 11ಕ್ಕೆ ನನ್ನ ಹುಟ್ಟುಹಬ್ಬವಿದೆ ನನಗಂತೂ ಭಾರಿ ಎಕ್ಸೈಟ್ಮೆಂಟ್ ಇದೆ.
ನನ್ನ ಹುಟ್ಟುಹಬ್ಬವನ್ನು ಈ ಬಾರಿ ವಿಶೇಷವಾಗಿ ಆಚರಿಸಬೇಕು ಎಂದು ನಾನು ನಿರ್ಧರಿಸಿದ್ದೇನೆ… ಅದಕ್ಕಾಗಿ ಯಾರಾದರೂ ಬಡವರಿಗೆ ಐದು ಜನಕ್ಕೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಬೇಕು ಎಂದು ನಾನು ತೀರ್ಮಾನ ಮಾಡಿದ್ದೇನೆ.. ಎಂದು ವಿಡಿಯೋ ಮೂಲಕ ಪ್ರತಾಪ್ ತಿಳಿಸಿದ್ದಾರೆ.. ನಿಮ್ಮಲ್ಲಿ ಯಾರಿಗಾದರೂ ಆಸಕ್ತಿ ಇದ್ದರೆ ನಿಮಗೆ ಕಣ್ಣಿನ ಸಮಸ್ಯೆ ಇದ್ದರೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸುತ್ತೇನೆ ಎಂದು ಪ್ರತಾಪ್ ತಿಳಿಸಿದ್ದಾರೆ.ಯಾರಿಗಾದರೂ ಸಮಸ್ಯೆ ಇದ್ದಲ್ಲಿ ಮೆಸೇಜ್ ಮಾಡಿ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಎಂದು ಪ್ರತಾಪ್ ಮನವಿ ಮಾಡಿದ್ದಾರೆ.
ಅಂದ ಹಾಗೆ ಬಿಗ್ ಬಾಸ್ ನಂತರ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಪ್ರತಾಪ್ ಆಗಾಗ ನಟಿಸುತ್ತಾ ಇದ್ದು,ಇದರ ಜೊತೆಗೆ ಡ್ರೋನ್ ಗೆ ಸಂಬಂಧಿಸಿದ ಆಫೀಸನ್ನು ಕೂಡ ನೋಡಿಕೊಳ್ಳುತ್ತಿದ್ದಾರೆ.