Thursday, August 21, 2025
26.4 C
Bengaluru
Google search engine
LIVE
ಮನೆUncategorizedಯಲಹಂಕದಲ್ಲಿ ಸ್ಫೋಟ.. ಬೆಚ್ಚಿಬಿದ್ದರು ಏರಿಯಾ ಜನ!

ಯಲಹಂಕದಲ್ಲಿ ಸ್ಫೋಟ.. ಬೆಚ್ಚಿಬಿದ್ದರು ಏರಿಯಾ ಜನ!

ಬೆಂಗಳೂರು: ಅದೊಂದು ಸ್ಫೋಟ ಇಡೀ ಏರಿಯಾ ಜನರನ್ನೇ ಬೆಚ್ಚಿ ಬೀಳಿಸಿತ್ತು ಸ್ಫೋಟದ ಸದ್ದು ಎದೆ ನಡುಗುವಂತೆ ಮಾಡಿತ್ತು.. ಮನೆಗಳೇ ಛಿದ್ರ ಛಿದ್ರವಾಗಿದ್ದವು.. ಆಗ ತಾನೆ ಮಲಗಿ ಎದ್ದವರು ಆಸ್ಪತ್ರೆ ಸೇರಿದ್ರು ಆತಂಕದಲ್ಲಿ ಜನರ ಓಡಾಟ ಪೀಸ್ ಪೀಸ್ ಆಗಿ ಬಿದ್ದಿರೋ ಮನೆಯ ಗೋಡೆ ಚೆಲ್ಲಾ ಪಿಲ್ಲಿಯಾಗಿರೋ ಕಿಟಕಿಯ ಗಾಜು ಎಲ್ಲೆಂದರಲ್ಲಿ ಇಟ್ಟಾಡಿರೋ ವಸ್ತುಗಳು.

ಹೌದು.ಇದು ಯಲಹಂಕದಲ್ಲಿರುವ ಎಲ್ ಬಿ ಎಸ್ ಲೇಔಟ್..ಈ ಕಟ್ಟಡದಲ್ಲಿ ಅಂಟಿಕೊಂಡಂತೆ ಐದು ಮನೆಗಳಿವೆ.. ಇಲ್ಲಿನ ಜನ ರಾತ್ರಿ ಮಲಗಿ ಬೆಳಗ್ಗೆ ಎದ್ದೇಳೋ ಸಮಯ.. 7.10 ರಲ್ಲಿ ದುರಂತವೊಂದು ಸಂಭವಿಸಿಬಿಟ್ಟಿತ್ತು..ಮದ್ಯದ ಮನೆಯಲ್ಲಿ ಸಂಭವಿಸಿದ ಸ್ಫೋಟ ಐದು ಮನೆಗಳಿಗೆ ಹಾನಿ ಮಾಡಿದೆ. ಗೋಡೆಗಳೇ ಉರುಳಿಬಿದ್ದಿವೆ..ಕಿಟಕಿ ಗಾಜುಗಳು ಪುಡಿ ಪುಡಿ ಯಾಗಿದೆ..ಘಟನೆಯಿಂದಾಗಿ ಮನೆಯಲ್ಲಿದ್ದ ಪಸಿಯಾ ಭಾನು, ಹಸ್ಮಾ ಎಂಬುವವರಿಗೆ ಗಂಭೀರ ಗಾಯವಾಗಿದ್ದು.ಸಲ್ಮಾ, ಶಾಹಿದ್ ಸೇರದಂತೆ ನಾಲ್ವರಿಗೆ ಸಣ್ಣಪುಟ್ಟ ಗಾಯವಾಗಿದೆ. ಪಸಿಯಾ ಭಾನು ,ಹಸ್ಮಾ ಇಬ್ಬರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು..ಉಳಿದ ಐವರಿಗೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಕೊಡಲಾಗ್ತಿದೆ.

ಘಟನಾ ಸ್ಥಳಕ್ಕೆ ಯಲಹಂಕ ಪೊಲೀಸರು,ಅಗ್ನಿಶಾಮಕ ಸಿಬ್ಬಂದಿ, ಗ್ಯಾಸ್ ಏಜೆನ್ಸಿ ಸಿಬ್ಬಂದಿ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ.. ಮೇಲ್ನೋಟಕ್ಕೆ ಇದು ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಸಂಭವಿಸಿರುವ ಅವಘಡ ಎನ್ನಲಾಗ್ತಿದೆ… ನಿನ್ನೆ ಅಷ್ಟೇ ಹಸ್ಮಾ ಭಾನು ಎಂಬುವವರು ಮನೆಗೆ ಹೊಸ ಗ್ಯಾಸ್ ತರಿಸಿಕೊಂಡಿದ್ದರು ರಾತ್ರಿ ಇಡೀ 14 ಕೆಜಿ ಅಷ್ಟು ಗ್ಯಾಸ್ ರಾತ್ರಿ ಸೋರಿಕೆ ಆಗಿದೆ..ಹೊರಹೋಗಲು ಸರಿಯಾದ ವೆಂಟಿಲೇಷನ್ ವ್ಯವಸ್ಥೆ ಕೂಡ ಇಲ್ಲ…ಬೆಳಗ್ಗೆ ಎದ್ದು ಸ್ಟೌ ಹಚ್ಚುವಾಗ ಸ್ಫೋಟಗೊಂಡಿರೊ ಅನುಮಾನ ಇದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆಗೆ ಕಾರಣ ಏನು ಅನ್ನೋದು ಗೊತ್ತಾಗಲಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments