ರಾಜ್ಯದ ಹಿತಾಸಕ್ತಿಗೆ, ಅಭಿವೃದ್ಧಿಗೆ ಧಕ್ಕೆ ಮಾಡಿದರೆ ಸಹಿಸಲ್ಲ. ನಿಯಮ ಉಲ್ಲಂಘಿಸಿದೆ ಕ್ರಿಯಾಶೀಲತೆ ತೋರಿ: ಅರಣ್ಯ ಪಿಸಿಸಿಎಫ್ ಗೆ ಸಿಎಂ ಸೂಚನೆ

ಬೆಂಗಳೂರು ಅ : ಅರಣ್ಯ ಇಲಾಖೆಯೊಂದಿಗಿನ ಗೊಂದಲಗಳನ್ನು ನಿವಾರಿಸಿಕೊಂಡು ರಾಜಸ್ವ ಸಂಗ್ರಹಣೆಗೆ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.‌

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಗಣಿ, ಭೂವಿಜ್ಞಾನ ಹಾಗೂ ಅರಣ್ಯ ಇಲಾಖೆ ಸಭೆಯಲ್ಲಿ ಈ ಸೂಚನೆ ನೀಡಿದರು.

ಗಣಿ ಇಲಾಖೆ ಪ್ರಗತಿ ಯು ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 54ರಷ್ಟು ಇತ್ತು . ಪ್ರಸಕ್ತ ಸಾಲಿನಲ್ಲಿ ಶೇ 46 ರಾಜಸ್ವ ಸಂಗ್ರಹಣೆ ಆಗಿದೆ. ಅರಣ್ಯ ಇಲಾಖೆಯೊಂದಿಗಿನ ಇರುವ ಗೊಂದಲಗಳನ್ನು ನಿವಾರಿಸಿಕೊಂಡು ರಾಜಸ್ವ ಸಂಗ್ರಹಣೆಗೆ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಸಕ್ತ ಸಾಲಿಗೆ ರಾಜಸ್ವ ಸಂಗ್ರಹಣೆ ಗುರಿ ರೂ 9000ಕೋಟಿ, ಅಕ್ಟೋಬರ್ ವರೆಗಿನ ರಾಜಸ್ವ ಸಂಗ್ರಹಣೆ ರೂ. 4070.22 ಕೋಟಿ

ರಾಜ್ಯದ ಅಭಿವೃದ್ಧಿಗೆ ಹಿತಾಸಕ್ತಿಗೆ ಪ್ರಾಮುಖ್ಯತೆ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಮುಖ್ಯಮಂತ್ರಿಗಳು, ರಾಜ್ಯದ ಹಿತಾಸಕ್ತಿಗೆ, ಅಭಿವೃದ್ಧಿಗೆ ಧಕ್ಕೆ ಮಾಡಿದರೆ ಸಹಿಸಲ್ಲ. ನಿಯಮ ಉಲ್ಲಂಘಿಸಿದೆ ಕ್ರಿಯಾಶೀಲತೆ ತೋರಿ ಎಂದು ಅರಣ್ಯ ಇಲಾಖೆ ಪಿಸಿಸಿಎಫ್ ಅವರಿಗೆ ಸಿಎಂ ಸೂಚನೆ ನೀಡಿದರು.

ಬೇರೆ ರಾಜ್ಯಗಳಲ್ಲಿ ಕಬ್ಬಿಣದ ಅದಿರನ್ನು ಅರಣ್ಯ ಉತ್ಪನ್ನ ಎಂದು ಪರಿಗಣಿಸಿರುವುದಿಲ್ಲ.ನಮ್ಮ ರಾಜ್ಯದಲ್ಲಿ ಇದೇ ಮಾದರಿ ಅಳವಡಿಸಿಕೊಳ್ಳಲು ಮುಂದಿನ ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ತರುವಂತೆ ಸೂಚಿಸಿದರು.

ಸಭೆಯಲ್ಲಿ ಗಣಿ ಭೂವಿಜ್ಞಾನ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ, ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್ ಅತೀಕ್, ವಾಣಿಜ್ಯ ಮತ್ತು ಗಣಿ ಇಲಾಖೆ ಕಾರ್ಯದರ್ಶಿ ವಿಪುಲ್ ಬನ್ಸಾಲ್, ಅರಣ್ಯ, ಜೀವಿ ಪರಿಸ್ಥಿತಿ ಅಪರ ಮುಖ್ಯ ಕಾರ್ಯದರ್ಶಿ ಎನ್ ಮಂಜುನಾಥ ಪ್ರಸಾದ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

 

 

 

Leave a Reply

Your email address will not be published. Required fields are marked *

Verified by MonsterInsights