
ಮನೆಯಲ್ಲಿ ಅನೇಕರು ಬರುತ್ತಾರೆ, ಹೋಗುತ್ತಾರೆ. ಅವರಲ್ಲಿ ಕೆಲವರು ಒಳ್ಳೆಯ ಸ್ವಭಾವದವರಾಗಿದ್ದರೆ, ಇನ್ನು ಕೆಲವರು ಹೊರಗಿನಿಂದ ನಗುಮುಖವಾಗಿದ್ದರೂ ಒಳಗಿಂದ ಅಸೂಯೆ ಪಡುತ್ತಿರುತ್ತಾರೆ. ಇಂತಹ ವ್ಯಕ್ತಿಗಳ ಅಸೂಯೆ ಮತ್ತು ನಕಾರಾತ್ಮಕ ಆಲೋಚನೆಗಳು ‘ದೃಷ್ಟಿ ದೋಷ’ವಾಗಿ ಪರಿಣಮಿಸುತ್ತವೆ. ಈ ದೃಷ್ಟಿ ದೋಷ ನಿವಾರಿಸಲು ಗುರುವಾರ ಈ ಸರಳ ಪರಿಹಾರ ಅನುಸರಿಸಬಹುದು.
ಯಾವುದೇ ಕಾರಣವಿಲ್ಲದೆ ಕೆಲಸಗಳು ಕೈಗೂಡುವುದಿಲ್ಲ ಅಥವಾ ನಿರೀಕ್ಷಿತ ಫಲಿತಾಂಶ ಮರೀಚಿಕೆಯಂತೆ ಕಾಣುವ ಸಮಯದಲ್ಲಿ, ಅಂದರೆ ನಮ್ಮ ಅರಿವಿಗೆ ಬಾರದಂತೆ ಏನೋ ನಕಾರಾತ್ಮಕ ಶಕ್ತಿ ನಮ್ಮ ಏಳಿಗೆಯನ್ನು ತಡೆಯುತ್ತಿದೆ ಎಂಬ ಭಾವನೆ ಮೂಡುವುದು ಸಹಜ.
ನಮ್ಮ ಮನೆಗೆ ಬರುವ ಕೆಲವರು ಹೊರಗಿನಿಂದ ನಗುಮುಖ ತೋರಿಸಿದರೂ ಒಳಗಿಂದ ಅಸೂಯೆ ಪಡುತ್ತಿರುತ್ತಾರೆ. ಇಂತಹ ನಕಾರಾತ್ಮಕ ದೃಷ್ಟಿಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತವೆ ಮತ್ತು ವಾಸ್ತು ದೋಷಕ್ಕೂ ಕಾರಣವಾಗಬಹುದು.

ವಾಸ್ತು ಶಾಸ್ತ್ರದ ಪ್ರಕಾರ, ಈ ನಕಾರಾತ್ಮಕ ಶಕ್ತಿಗಳನ್ನು ಮನೆಯಿಂದ ಹೊರಹಾಕಲು ಒಂದು ಸರಳ ವಿಧಾನ ಇದೆ. ಪ್ರತಿ ಗುರುವಾರ ಸಂಜೆಯ ಸಮಯದಲ್ಲಿ ಸ್ವಲ್ಪ ಗೋಮೂತ್ರವನ್ನು ತೆಗೆದುಕೊಳ್ಳಿ ಅದಕ್ಕೆ ಚಿಟಿಕೆ ಅರಿಶಿನ ಬೆರೆಸಿ ಮಿಶ್ರಣ ಮಾಡಿ. ಈ ಮಿಶ್ರಣದಿಂದ ಮನೆಯ ಮುಖ್ಯ ದ್ವಾರದ ಹೊಸ್ತಿಲನ್ನು ಶುಚಿಯಾಗಿ ಒರೆಸಿರಿ.
ಗೋಮೂತ್ರ ಪರಿಸರವನ್ನು ಪವಿತ್ರಗೊಳಿಸುತ್ತದೆ, ಅರಿಶಿನ ಕ್ರಿಮಿನಾಶಕವಾಗಿ ಕೆಲಸ ಮಾಡಿ ನಕಾರಾತ್ಮಕ ಕಂಪನಗಳನ್ನು ತಡೆಯುತ್ತದೆ. ಈ ಕ್ರಮವು ಮನೆಯಲ್ಲಿ ಶಾಂತಿ ಮತ್ತು ಸೌಭಾಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.




