Freedom tv desk : ಗರ್ಭಿಣಿಯರು ತಾನು ಆರೋಗ್ಯವಾಗಿದ್ದರೆ, ಹುಟ್ಟುವಂತಹ ಮಗು ಕೂಡ ಆರೋಗ್ಯವಾಗಿರುವುದನ್ನು ಈ ಕಾರಣಕ್ಕಾಗಿ ಗರ್ಭಾವಸ್ಥೆಯಲ್ಲಿ ಸೇವಿಸುವ ಆಹಾರ ಪದಾರ್ಥಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ವಿಶೇಷವಾಗಿ ಕೆಲವೊಂದು ಹಣ್ಣುಗಳಿಂದ ದೂರವಿರಬೇಕು.

ಗರ್ಭಿಣಿ ಮಹಿಳೆಯರು ತಮ್ಮ ಹಾಗೂ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಆರೋಗ್ಯಕ್ಕಾಗಿ, ವೈದ್ಯರು ಸೂಚಿಸಿರುವ ಆಹಾರಗಳನ್ನು ಮಾತ್ರ ಸೇವನೆ ಮಾಡಬೇಕು. ಗರ್ಭಿಣಿಯರು ಮಾತ್ರ ಇಂತಹ ಹಣ್ಣುಗಳಿಂದ ದೂರವಿದ್ದರೆ ಒಳ್ಳೆಯದು. ಇಲ್ಲಾಂದ್ರೆ ಆರೋಗ್ಯದ ಮೇಲೆ ಅಡ್ಡಪರಿಣಾಮಗಳು ಒಂಟಾಗುವ ಸಾಧ್ಯತೆಗಳು ಉಂಟಾಗುತ್ತದೆ.

ಹಸಿ ಪಪ್ಪಾಯಿ ಹಾಗೂ ಅರ್ಧಂಬರ್ಧ ಮಾಗಿದ ಪಪ್ಪಾಯಿ ಹಣ್ಣು ಗರ್ಭಿಣಿ ಮಹಿಳೆಯರು ಆರೋಗ್ಯಕ್ಕೆ ಅಷ್ಟು ಒಳ್ಲೆಯದಲ್ಲ. ಯಾಕೆಂದ್ರೆ ಈ ಹಣ್ಣುಗಳನ್ನು ಗರ್ಭಿಣಿಯರು ತಿಂದರೆ ಗರ್ಭಪಾತ ಉಂಟಾಗುವ ಸಾಧ್ಯತೆಗಳು ಹೆಚ್ಚಾಗುತ್ತದೆ.

ಹುಳಿ ಸಿಹಿ ಮಿರ್ಶಿತ ಅನಾನಸು ಹಣ್ಣಿನಲ್ಲಿ ಅತ್ಯಧಿಕ ಬ್ರೊಮೆಲೈನ್ ಅಂಶವಿರುವುದರಿಂದ ಗರ್ಭಪಾತ ಉಂಟಾಗುವ ಸಾಧ್ಯತೆ ಇರುತ್ತದೆ. ಸುರಕ್ಷತೆಯ ದೃಷ್ಟಿಯಿಂದ, ಈ ಹಣ್ಣಿನಿಂದ ಗರ್ಭಿಣಿಯರು ದೂರವಿದ್ದರೆ ಒಳ್ಳೆಯದು.

ಚಳಿಗಾಲದಲ್ಲಿ ಹೇರಳವಾದ ದ್ರಾಕ್ಷಿ ಹಣ್ಣಿನಲ್ಲಿ ಉತ್ತಮ ಪೋಷಕಾಂಶಗಳಿವೆ. ಆದರೆ ದ್ರಾಕ್ಷಿಯ ಸಿಪ್ಪೆಯಲ್ಲಿರುವ ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ತಮ್ಮ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ದ್ರಾಕ್ಷಿ ಹಣ್ಣುಗಳಿಂದ ಖಡ್ಡಾಯವಾಗಿ ದೂರವಿರಬೇಕು.

ಗರ್ಭಿಣಿ ಮಹಿಳೆಯರು ಪೀಚ್ ಹಣ್ಣುಗಳಿಂದ ಕೂಡ, ದೂರವಿರಬೇಕು ಎಂದು ಸ್ತ್ರೀರೋಗ ತಜ್ಞರು ಕೂಡ ಸಲಹೆ ನೀಡುತ್ತಾರೆ. ಯಅಕೆಂದ್ರೆ ಈ ಹಣ್ಣುಗಳ ಸೇವನೆಯಿಂದ ಕೂಡ ರಕ್ತಸ್ರಾವವಅಗಿ, ಕಾಣಿಸಿಕೊಂಡು ಗರ್ಭಪಾತ ಆಗುವ ಸಾಧ್ಯತೆ ಇರುತ್ತದೆ.

ನೀರಿನಾಂಶ ಹೆಚ್ಚಾಗಿರುವ ಕಲ್ಲಂಗಡಿ ಹಣ್ಣಿನಲ್ಲಿ, ನೈಸರ್ಗಿಕ ಸಿಹಿಅಂಶ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಗರ್ಭಿಣಿಯರು ಈ ಹಣ್ಣುಗಳ ಸೇವನೆಮಾಡಿದರೆ, ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ರೆಫ್ರಿಜರೇಟರ್ ಅಥವಾ ಫ್ರಿಡ್ಜ್ನಲ್ಲಿರುವ ಹಣ್ಣುಗಳನ್ನು ಗರ್ಭಿಣಿ ಮಹಿಳೆಯರು ತಿನ್ನಲು ಹೋಗಬಾರದು. ಯಾಕೆಂದರೆ ಈ ಹಣ್ಣುಗಳು ತಾಜಾಆಗಿರುವುದಿಲ್ಲ ಜೊತೆಗೆ ತಂಪಾಗಿರುವ ಕಅರಣ, ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಇರುತ್ತವೆ.