Thursday, November 20, 2025
19.9 C
Bengaluru
Google search engine
LIVE
ಮನೆರಾಜ್ಯPF ಹಣವನ್ನ ಇನ್ಮುಂದೆ ATMನಲ್ಲೇ ವಿತ್​​ ಡ್ರಾ ಮಾಡಿ..!

PF ಹಣವನ್ನ ಇನ್ಮುಂದೆ ATMನಲ್ಲೇ ವಿತ್​​ ಡ್ರಾ ಮಾಡಿ..!

ನೌಕರರು ತಮ್ಮ PF ಹಣವನ್ನ ಬಿಡಿಸಿಕೊಳ್ಳಬೇಕು ಅಂದರೆ ವಾರ, ತಿಂಗಳುಗಟ್ಟಲೆ ಕಾಯಬೇಕಿತ್ತು. ಆನ್​​​ಲೈನ್ ಮೂಲಕ ಅರ್ಜಿ ಸಲ್ಲಿಸಿದರೂ ಕೂಡ ತಮ್ಮ ಪಿಎಫ್ ಹಣ ಬಿಡಿಸಿಕೊಳ್ಳಲು ಆಗುತ್ತಿರಲಿಲ್ಲ. ಅಲ್ಲದೇ ಕೆಲ ಕಾರಣಗಳನ್ನ ಒಡ್ಡಿ ಪಿಎಫ್​​​ ರಿಜೆಕ್ಟ್ ಆಗುತ್ತಿದ್ದ ಉದಾಹರಣೆಗಳೇ ಹೆಚ್ಚು. ಆದರೆ ಇನ್ನು ಮುಂದೆ ಪಿಎಫ್ ಹಣವನ್ನ ಎಟಿಎಂನಲ್ಲಿ ತಾವು ಹಣ ಬಿಡಿಸಿಕೊಂಡಷ್ಟೇ ಸುಲಭವಾಗಿ ವಿತ್ ಡ್ರಾ ಮಾಡಬಹುದು.

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಹೊಸ ಪ್ಲಾಟ್‌ಫಾರ್ಮ್ EPFO ​​3.0 ಶುರು ಮಾಡುತ್ತಿದೆ. ಇದರಲ್ಲಿ ಗ್ರಾಹಕರು ಪಿಎಫ್ ಹಣವನ್ನು ಪಡೆಯಲು ವಾರಗಟ್ಟಲೆ ಕಾಯಬೇಕಿಲ್ಲ. ಕ್ಷಣಮಾತ್ರದಲ್ಲಿ ನಿಮ್ಮ ಪಿಎಫ್ ಹಣ ನಿಮ್ಮ ಕೈಯಲ್ಲಿ ಇರುತ್ತದೆ. ಹೊಸ EPFO ​​ಪ್ಲಾಟ್‌ಫಾರ್ಮ್ ಪ್ರಾರಂಭವಾದ ನಂತರ, ನೀವು ATM ಮತ್ತು UPI ಮೂಲಕವೂ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು.

ಇದೇ ಜೂನ್​​ನಿಂದ EPFO ​​3.0 ಪ್ಲಾಟ್​ಫಾರ್ಮ್ ಶುರು ಆಗುತ್ತಿದೆ. ಇಪಿಎಫ್ ಸದಸ್ಯರು ಯುಪಿಐ ಮತ್ತು ಎಟಿಎಂ ಮೂಲಕ ಪಿಎಫ್ ಹಣವನ್ನು ತಕ್ಷಣವೇ ಪಡೆಯಲು ಸಾಧ್ಯವಾಗುತ್ತದೆ.

ಹೊಸ ಸೌಲಭ್ಯಗಳ ಅಡಿಯಲ್ಲಿ, ಇಪಿಎಫ್ ಸದಸ್ಯರು ಯುಪಿಐ ಮತ್ತು ಎಟಿಎಂ ಮೂಲಕ ಹಣವನ್ನು ಹಿಂಪಡೆಯಲು ಮಾತ್ರವಲ್ಲದೆ, ಅವರ ಪಿಎಫ್ ಬ್ಯಾಲೆನ್ಸ್ ಅನ್ನು ಸಹ ಪರಿಶೀಲಿಸಬಹುದು. ಇದಲ್ಲದೆ, ಜನರು ತಮ್ಮ ಆಯ್ಕೆಯ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವ ಸೌಲಭ್ಯವನ್ನು ಸಹ ಪಡೆಯುತ್ತಾರೆ. ಇದರಲ್ಲಿ ಭದ್ರತಾ ಕ್ರಮಗಳೂ ಇರುತ್ತವೆ, ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಖಾತೆದಾರರು OTP ಪರಿಶೀಲನೆಯ ಮೂಲಕ ತಮ್ಮ EPF ಖಾತೆಯನ್ನು ನವೀಕರಿಸಬಹುದು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments