Top Newsಮನರಂಜನೆಸುದ್ದಿ

ಹನುಮಂತನ ಹಿಂದೆ ಬಿದ್ದ ಶೋಭಾ ಶೆಟ್ಟಿ; ಇದರ ಹಿಂದಿದೆ ಮಾಸ್ಟರ್​ ಪ್ಲ್ಯಾನ್ ಏನು?

ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಬಹುತೇಕ ಆಟಗಾರರಿಗೆ ಇವರೇ ಫೇವರಿಟ್. ಸುದೀಪ್ ಅವರು ಕೂಡ ಅನೇಕ ಬಾರಿ ಹನುಮಂತ ಆಟವನ್ನು ಹೊಗಳಿದ್ದು ಇದೆ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ರಿಯಾಲಿಟಿ ಶೋ ಮೂಲಕ ಫೇಮಸ್ ಆದ ರಜತ್ ಹಾಗೂ ತೆಲುಗು ಬಿಗ್ ಬಾಸ್​ನಲ್ಲಿ ಹಲ್ ಚಲ್ ಎಬ್ಬಿಸಿದ್ದ ಶೋಭಾ ಶೆಟ್ಟಿ ದೊಡ್ಮನೆ ಒಳಗೆ ಬಂದಿದ್ದಾರೆ. ಶೋಭಾ ಶೆಟ್ಟಿ ಅವರು ಸದ್ಯ ಹನುಮಂತನ ಹಿಂದೆ ಬಿದ್ದಿದ್ದಾರೆ.ಬಿಗ್ ಬಾಸ್ ಮನೆ ಯಲ್ಲಿ ಹನುಮಂತ ಅವರ ಜನಪ್ರಿಯತೆ ಹೆಚ್ಚಾಗುತ್ತಿದೆ. ಶೋಭಾ ಶೆಟ್ಟಿ ಅವರ ವೈಲ್ಡ್ ಕಾರ್ಡ್ ಎಂಟ್ರಿಯ ನಂತರ, ಅವರು ಹನುಮಂತನ ಆಟವನ್ನು ಮೆಚ್ಚಿಕೊಂಡಿದ್ದಾರೆ. ಹನುಮಂತ ಅವರ ಬುದ್ದಿವಂತಿಕೆ ಮತ್ತು ಆಟದ ತಂತ್ರಗಳನ್ನು

ಹನುಮಂತ ಹಳ್ಳಿ ಹುಡುಗ ಇರಬಹುದು. ಆದರೆ, ಅವರಿಗೆ ಬಿಗ್ ಬಾಸ್ ಆಟದ ಬಗ್ಗೆ ಪಕ್ಕಾ ತಿಳಿದಿದೆ. ಯಾವಾಗ ಹೇಗೆ ನಡೆದುಕೊಳ್ಳಬೇಕು, ಹೊರಗಿನಿಂದ ಬಂದವರ ಜೊತೆ ಹೇಗೆ ಮಾತನಾಡಬೇಕು ಎಂಬುದು ಗೊತ್ತಿದೆ. ಇತ್ತೀಚೆಗೆ ಚೈತ್ರಾ ಅವರು ಆಸ್ಪತ್ರೆ ಸೇರಿದಾಗ ಹೊರಗಿನ ವಿಚಾರಗಳನ್ನು ಹೊತ್ತು ತಂದಿದ್ದರು. ಎಲ್ಲರ ಕಿವಿಯಲ್ಲೂ ಒಂದಷ್ಟು ವಿಚಾರಗಳನ್ನು ಹೇಳಿದ್ದರು. ಅಂತೆಯೇ ಹನುಮಂತನ ಆಟದ ಬಗ್ಗೆಯೂ ಕೆಲವು ವಿಚಾರಗಳನ್ನು ಅವರು ಹೇಳಿದ್ದರು.  ಇದು ಅವರ ನಿಜವಾದ ಆಟವನ್ನು ತೋರಿಸುತ್ತದೆ.ಹನುಮಂತನ ಆಟವನ್ನು ಶೋಭಾ ಶೆಟ್ಟಿ ಹೊರಗಿನಿಂದ ನೋಡಿ ಬಂದಿದ್ದಾರೆ. ಈ ಕಾರಣಕ್ಕೆ ಅವರ ಹಿಂದೆ ಬಿದ್ದಿದ್ದಾರೆ. ದೊಡ್ಮನೆಗೆ ಎಂಟ್ರಿ ಕೊಟ್ಟ ತಕ್ಷಣ ಎಲ್ಲರಿಗೂ ತಮ್ಮ ಪರಿಚಯ ಮಾಡಿಕೊಂಡರು ಶೋಭಾ. ಅದರಲ್ಲೂ ಹನುಮಂತನ ಬಳಿ ಬಂದು ವಿಶೇಷವಾಗಿ ತಮ್ಮ ಬಗ್ಗೆ ಹೇಳಿಕೊಂಡರು. ಆ ಬಳಿಕ ದೊಡ್ಮನೆ ತೋರಿಸುವಂತೆ ಹನುಮಂತನ ಬಳಿ ಕೇಳಿದ್ದರು.

 

Comments (0)

Your email address will not be published. Required fields are marked *

Back to top button