Freedom TV

ಮನೆ ಊಟದ ವಿಚಾರ; ಮ್ಯಾಜಿಸ್ಟ್ರೇಟ್ ತೀರ್ಪು ಪ್ರಶ್ನಿಸಿ ಹೈಕೋರ್ಟ್​ಗೆ ದರ್ಶನ್ ಮೇಲ್ಮನವಿ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಅವರಿಗೆ ಮನೆಯಿಂದ ಆಹಾರ, ಹಾಸಿಗೆ, ಪುಸ್ತಕಗಳನ್ನು ತರಿಸಿಕೊಳ್ಳಲು ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿ ಅದನ್ನು ಹಿಂಪಡೆದಿದ್ದರು. ಈಗ ದರ್ಶನ್ ಪರ ವಕೀಲರು ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಸೇರಿ ಅನೇಕರು ಅರೆಸ್ಟ್ ಆಗಿದ್ದಾರೆ. ಅವರಿಗೆ ಜೈಲಿನ ಊಟ ದೇಹಕ್ಕೆ ಒಗ್ಗುತ್ತಿಲ್ಲ. ಭೇದಿ, ಅತಿಸಾರ ಮತ್ತಿತ್ಯಾದಿ ಸಮಸ್ಯೆ ಉಂಟಾಗುತ್ತಿದೆ, ಜೊತೆಗೆ ದೇಹದ ತೂಕ ಇಳಿಕೆ ಆಗುತ್ತಿದೆ ಎಂದು ಅವರ ಪರ ವಕೀಲರು ಹೇಳಿದ್ದರು. ಹೀಗಾಗಿ ಅವರು ಮನೆ ಊಟ, ಬಟ್ಟೆಗಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಅರ್ಜಿಯನ್ನು ರಿಜೆಕ್ಟ್ ಮಾಡಿತ್ತು. ಈಗ ಮನೆ ಊಟ, ಬಟ್ಟೆ, ಹಾಸಿಗೆಗಾಗಿ ಮತ್ತೆ ಹೈಕೋರ್ಟ್​ಗೆ ನಟ ದರ್ಶನ್ ಮೇಲ್ಮನವಿ ಸಲ್ಲಿಕೆ ಮಾಡಿದ್ದಾರೆ.

ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಮೊದಲು ಮನೆಯಿಂದ ಊಟ, ಬಟ್ಟೆ, ಹಾಸಿಗೆ ಪಡೆಯಲು ಅನುಮತಿ ನಿರಾಕರಿಸಿತ್ತು. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಪ್ರಶ್ನಿಸಿ ನಟ ದರ್ಶನ್ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಹೈಕೋರ್ಟ್ ಎದುರು ದರ್ಶನ್ ಅವರ ಪರ ವಕೀಲರು ಯಾವ ರೀತಿಯ ವಾದ ಮಂಡಿಸುತ್ತಾರೆ ಎಂಬುದನ್ನು ನೋಡಬೇಕಿದೆ.   ದರ್ಶನ್​ಗೆ ಮನೆ ಊಟ ಹಾಗೂ ಹಾಸಿಗೆ ನೀಡಬೇಕು ಎಂದು ದರ್ಶನ್ ಪರ ವಕೀಲರು ಈ ಮೊದಲು ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಈ ಅರ್ಜಿಯನ್ನು ತಾಂತ್ರಿಕ ಕಾರಣ ನೀಡಿ ದರ್ಶನ್ ಪರ ವಕೀಲರು ಹಿಂಪಡೆದಿದ್ದರು. ಪ್ರಕರಣದ ಕುರಿತಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರುವ ಆದೇಶ ಪ್ರಶ್ನಿಸಬೇಕಿದೆ. ಈ ಹಿನ್ನೆಲೆಯಲ್ಲಿ ಹಳೆಯ ಅರ್ಜಿಯನ್ನು ವಾಪಸ್ ಪಡೆದು ಕೊಳ್ಳಲಾಗಿತ್ತು. ಈಗ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.

Comments (0)

Your email address will not be published. Required fields are marked *

Back to top button