‘ಫಾರೆಸ್ಟ್’ ಸಿನಿಮಾದಲ್ಲಿ ಚಿಕ್ಕಣ್ಣ, ಶರಣ್ಯ ಶೆಟ್ಟಿ, ಅನೀಶ್ ತೇಜೇಶ್ವರ್, ಗುರುನಂದನ್, ಅವಿನಾಶ್, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸುನೀಲ್ ಕುಮಾರ್ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಈ ಸಿನಿಮಾದ ಹೊಸ ಹಾಡು ಮಿಲಿಯನ್ ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ. ಸ್ಯಾಂಡಲ್ವುಡ್ನಲ್ಲೀಗ ವಿವಿಧ ಕಾನ್ಸೆಪ್ಟ್ಗಳ ಸಿನಿಮಾ ಮೂಡಿಬರುತ್ತಿವೆ. ಈಗ ಶೂಟಿಂಗ್ ಮುಗಿಸಿಕೊಂಡಿರುವ ‘ಫಾರೆಸ್ಟ್’ ಚಿತ್ರದಲ್ಲೂ ಅಂಥ ಡಿಫರೆಂಟ್ ಕಾನ್ಸೆಪ್ಟ್ ಇದೆ ಎಂದು ತಂಡ ಹೇಳಿಕೊಂಡಿದೆ. ‘ಎನ್.ಎಂ.ಕೆ. ಸಿನಿಮಾಸ್’ ಬ್ಯಾನರ್ನಲ್ಲಿ ಎನ್.ಎಂ. ಕಾಂತರಾಜ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಂದ್ರ ಮೋಹನ್ ಅವರು ನಿರ್ದೇಶನ ಮಾಡಿದ್ದಾರೆ. ಚಿಕ್ಕಣ್ಣ, ಗುರುನಂದನ್, ಅನೀಶ್ ತೇಜೇಶ್ವರ್, ರಂಗಾಯಣ ರಘು ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ‘ಫಾರೆಸ್ಟ್’ ಸಿನಿಮಾದ ಹೊಸ ಸಾಂಗ್ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. 
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com