Freedom TV

ಎನ್‌ಕೌಂಟರ್‌ ಕಾನೂನು ಬರಲೇಬೇಕು -ಸಚಿವ ಸಂತೋಷ್ ಲಾಡ್

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆಯನ್ನು ನಾನು‌ ಖಂಡಿಸುತ್ತೇನೆ ಈ ರೀತಿ ಘಟನೆ ಆಗಬಾರದು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.

ಕಿಮ್ಸ್ ಶವಗಾರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಹಲವು ಮುಖಂಡರು ಈ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ನಾನು ಏನು ಹೇಳಲ್ಲ. ಆದರೆ ಮುಂದೆ ಇದಕ್ಕೆ ಒಂದು ಎನ್‌ಕೌಂಟರ್‌ ಕಾನೂನು ಬರಲೇಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ನಾನು ಬೇರೆಯವರು ಮಾಡಿದ ಆರೋಪಕ್ಕೆ ಲೆಕ್ಕ‌ ಕೊಡಬಹುದು.ಕೆಲವರು ಇದನ್ನ ರಾಜಕೀಯ ಮಾಡಲು ಹೊರಟಿದ್ದಾರೆ.  ತನಿಖೆ ಬಗ್ಗೆ ನಾನು ಈಗ ಮಾತಾಡಲ್ಲ. ಲವ್ ಜಿಯದ್ ಎಂದರೆ ಏನು? ಕೊಲೆ ಮಾಡಿದವರಿಗೆ ಶಿಕ್ಷೆಯಾಗಬೇಕು. ರಾಜಕೀಯ ಉತ್ತರ ಕೊಡೊದು ಈಗ ಸರಿಯಲ್ಲ ಎಂದು ಸಮರ್ಥನೆ ಮಾಡಿಕೊಂಡರು.

Comments (0)

Your email address will not be published. Required fields are marked *

Back to top button