ರುಚಿಕರವಾದ ಎಳ್ಳು ಚಿಕ್ಕಿ ಮಾಡುವ ವಿಧಾನ …

ಬೇಕಾಗುವ ಪದಾರ್ಥಗಳು..

. ಬಿಳಿ ಎಳ್ಳು -1 ಬಟ್ಟಲು

.ಪುಡಿ ಮಾಡಿದ ಬೆಲ್ಲ – 1 ಬಟ್ಟಲು

. ನೀರು – ಸ್ವಲ್ಪ

. ತುಪ್ಪ – ಸ್ವಲ್ಪ

. ಏಲಕ್ಕಿ ಪುಡಿ -ಸ್ವಲ್ಪ

. ಅಡುಗೆ ಸೋಡಾ – ಕಾಲು ಚಮಚ

ಮಾಡುವ ವಿಧಾನ …

. ಮೊದಲಿಗೆ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಎಳ್ಳನ್ನು ಹಾಕಿಕೊಂಡು 2 ನಿಮಿಷಗಳವರೆಗೆ ಫ್ರೈ ಮಾಡಿಕೊಂಡು ಪಕ್ಕಕ್ಕಿಡಿ.

. ಅದೇ ಪ್ಯಾನ್​ಗೆ ಬೆಲ್ಲ ಹಾಕಿ , 2 ಚಮಚ ನೀರನ್ನು ಸೇರಿಸಿಕೊಳ್ಳಿ. ಮಿಡಿಯಂ​ ಉರಿಯಲ್ಲಿ ಬೆಲ್ಲವನ್ನು ಕರಿಗಿಸಿಕೊಳ್ಳಿ. ಕರಿಗಿಸಿದ ಬೆಲ್ಲಕ್ಕೆ ಒಂದು ಚಮಚ ತುಪ್ಪ, ಏಲಕ್ಕಿ ಪುಡಿಯನ್ನು ಸೇರಿಸಿಕೊಂಡು ಬೆಲ್ಲದ ಪಾಕ ಕಂದು ಬಣ್ಣ ಆಗುವವರೆಗೆ ತಿರುವಿಕೊಳ್ಳಿ.

. ಆ ಮಿಶ್ರಣಕ್ಕೆ ಕಾಲು ಚಮಚ ಸೋಡಾವನ್ನು ಹಾಕಿ ಸ್ವಲ್ಪ ಫ್ರೈ ಮಾಡಿ, ಬಳಿಕ ಎಳ್ಳನ್ನು ಸೇರಿಸಿಕೊಳ್ಳಿ.

. ಸಣ್ಣ ಉರಿಯಲ್ಲಿ 2 ರಿಂದ 3 ನಿಮಿಷ ಈ ಮಿಶ್ರಣವನ್ನು ತಿರುವಿಕೊಳ್ಳಬೇಕು. ಈಗ ಒಂದು ಪ್ಲೇಟ್​ಗೆ ತುಪ್ಪ ಸವರಿ ಬೆಲ್ಲ ಮತ್ತು ಎಳ್ಳಿನ ಮಿಶ್ರನವನ್ನು ಅದಕ್ಕೆ ವರ್ಗಾಯಿಸಿಕೊಳ್ಳಿ. ನಂತರ ಸಮತಟ್ಟಾಗಿ ಪ್ಲೇಟ್​ಗೆ ಹರಡಿಕೊಂಡು ಬಿಸಿಯಿರುವಾಗಲೇ ಚೌಕಾಕಾರದಲ್ಲಿ ಚಾಕುವಿನಿಂದ ತುಂಡರಿಸಿಕೊಳ್ಳಿ. ಅರ್ಧ ಗಂಟೆಗಳ ಕಾಲ ಹಾಗೆಯೇ ಬಿಡಿ, ಇದೀಗ ಎಳ್ಳು ಚಿಕ್ಕಿ ಸವಿಯಲು ಸಿದ್ಧ.

By admin

Leave a Reply

Your email address will not be published. Required fields are marked *

Verified by MonsterInsights