Wednesday, January 28, 2026
18.8 C
Bengaluru
Google search engine
LIVE
ಮನೆಜಿಲ್ಲೆಕಾರಿನಿಂದ ಕೆಳಗಿಳಿದವರು ಕಾಡಾನೆ ದಾಳಿಯಿಂದ ಪಾರು

ಕಾರಿನಿಂದ ಕೆಳಗಿಳಿದವರು ಕಾಡಾನೆ ದಾಳಿಯಿಂದ ಪಾರು

ಮಡಿಕೇರಿ : ಸಂರಕ್ಷಿತ ಅರಣ್ಯ ನಡುವಿನ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರಿನಿಂದ ಇಳಿದ ಪ್ರಯಾಣಿಕರಿಬ್ಬರು ಅಟ್ಟಿಸಿಕೊಂಡು ಬಂದ ಕಾಡಾನೆಯ ದಾಳಿಯಿಂದ ಪಾರಾಗಿರುವ ರೋಚಕ ವಿಡಿಯೋವೊಂದು ವೈರಲ್ ಆಗಿದೆ.

ಈ ಘಟನೆ ಕೇರಳ ವಯನಾಡು ವಲಯದ ಮುತುಂಗಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ. ದಟ್ಟಡವಿ ನಡುವಿನ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಕೆಳಗಿಳಿದಿದ್ದಾರೆ.

ಈ ಸಂದರ್ಭ ಅಲ್ಲಿಯೇ ಸುಳಿದಾಡುತ್ತಿದ್ದ ಹೆಣ್ಣಾನೆ ಇವರಿಬ್ಬರನ್ನು ಅಟ್ಟಿಸಿಕೊಂಡು ಬಂದಿದೆ. ಅದರ ಹಿಡಿತದಿಂದ ಪಾರಾಗಲು ಓಡಲಾರಭಿಸಿದಾಗ ಒಬ್ಬ ಕೆಳಗೆ ಬೀಳುತ್ತಾನೆ.

ಅವನನ್ನು ತುಳಿಯಲು ಕಾಡಾನೆ ಮುಂದಾಗುತ್ತದೆ. ಆದರೆ ಅದೃಷ್ಟವಶಾತ್ ಆನೆಯ ಕಾಲು ಕೆಳಗೆ ಬಿದ್ದ ವ್ಯಕ್ತಿಯ ದೇಹಕ್ಕೆ ತಗಲುವುದಿಲ್ಲ. ನಂತರ ಆನೆಗೆ ಏನಾಯಿತೋ….. ಅಷ್ಟಕ್ಕೇ ಆನೆ ಸುಮ್ಮನೆ ಅಡವಿಯೊಳಗೆ ಸೇರಿಕೊಂಡಿದೆ. ಎದುರು ಹೋಗುತ್ತಿದ್ದ ಕಾರಿನವರು ವಿಡಿಯೋ ಸೆರೆಹಿಡಿದಿದ್ದಾರೆ. ಮಹಿಳೆಯರು ಮಲೆಯಾಳಿ ಭಾಷೆಯಲ್ಲಿ ಮಾತನಾಡಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments