ಜಿಲ್ಲೆ

3 ಅಂತಸ್ತಿನ ಕಟ್ಟಡದಿಂದ ಆಯತಪ್ಪಿ ಬಿದ್ದು ವೃದ್ದ ಸಾವು

ಧಾರವಾಡ: ಬಹುಮಹಡಿ ಕಟ್ಟಡಗಳನ್ನು ಹತ್ತುವ ಮುನ್ನ ಒಮ್ಮೆ ಯೋಚಿಸಿ. ಯಾಕಂದ್ರೆ, ವ್ಯಕ್ತಿಯೊಬ್ಬ ಮೂರು ಅಂತಸ್ತಿನ ಕಟ್ಟಡದ ಮೇಲೆ ಹೋಗಿದ್ದಾನೆ.

ಮೇಲಿನಿಂದ ಕೆಳಗೆ ನೋಡ್ತಿದ್ದಂತೆ ತಲೆ ತಿರುಗೋಕೆ ಶುರುವಾಗಿದೆ. ನೋಡನೋಡ್ತಿದ್ದಂತೆ ಆಯತಪ್ಪಿ ಬಿಲ್ಡಿಂಗ್ ಮೇಲಿಂದ ಕೆಳಗೆ ಬಿದ್ದು, ಸಾವನ್ನಪ್ಪಿರುವ ಘಟನೆ, ಧಾರವಾಡದ ಮಾಳಾಪುರದಲ್ಲಿ ಸಂಭವಿಸಿದೆ. ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ, 65 ವರ್ಷದ ವೃದ್ಧ ಅಮುದ್ದೀನ್ ಮಂಗಳಗಟ್ಟಿಯನ್ನು, ತಕ್ಷಣವೇ ಕಿಮ್ಸ್​ ಆಸ್ಪತ್ರೆಗೆ ಕರೆದದೊಯ್ಯಲಾಗಿದೆ. ಆದರೆ ಚಿಕಿತ್ಸೆ ಸ್ಪಂದಿಸದೇ ಸಾವನ್ನಪ್ಪಿದ್ದು, ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments (0)

Your email address will not be published. Required fields are marked *

Back to top button