Top Newsಜಿಲ್ಲೆಧರ್ಮರಾಜಕೀಯರಾಜ್ಯವೆಬ್ ಸ್ಟೋರೀಸ್ಸುದ್ದಿ

ಈದ್ಗಾ ಮೈದಾನ ಇನ್ಮುಂದೆ ರಾಣಿ ಚೆನ್ನಮ್ಮ ಮೈದಾನವೆಂದು ಘೋಷಣೆ

ಹುಬ್ಬಳ್ಳಿ: ಇನ್ಮುಂದೆ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನವೆಂದು ಮಹಾನಗರ ಪಾಲಿಕೆಯ ಉಪಮೇಯರ್‌ ಸಂತೋಷ್‌ ಚೌಹ್ವಾಣ್‌ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಪ್ರತಿ ಬಾರಿಯೂ ಗಣೇಶೋತ್ಸವದ ವೇಳೆ ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದ ಗ್ರೌಂಡ್‌ ಈ ಬಾರಿ ಗಣೇಶೋತ್ಸವವು ಮೈದಾನದಲ್ಲಿ ಶಾಂತಿಯುತವಾಗಿ ನಡೆಯಿತು. ಈ ಗಣೇಶೋತ್ಸವದ ಕಾರ್ಯಕ್ರಮದಲ್ಲಿಯೇ ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನ ಎಂದು ಮರುನಾಮಕರಣ ಮಾಡಲಾಗಿದೆ. ಈ ಬಗ್ಗೆ ಮಹಾನಗರ ಪಾಲಿಕೆಯು ಠರಾವು ಪಾಸ್ ಮಾಡಿದೆ.

ಇನ್ನು ಈ ಬಾರಿ ಮುಖ್ಯ ಅತಿಥಿಯಾಗಿ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಸಕ ಮಹೇಶ್ ಟೆಂಗಿನಕಾಯಿ, ಗಜಾನನ ಉತ್ಸವ ಮಹಾಮಂಡಳಿ ಅಧ್ಯಕ್ಷ ಸಂಜೀವ ಬಡಾಸ್ಕರ್ ಸೇರಿದಂತೆ ಹಲವರು ಪ್ರತಾಪ್ ಸಿಂಹಗೆ ಸಾಥ್ ನೀಡಿದರು.

Comments (0)

Your email address will not be published. Required fields are marked *

Back to top button