ಕೋಲಾರ : ಮಾಲೂರು ಶಾಸಕ ಕೆವೈ ನಂಜೆಗೌಡ ಮನೆಯ ಇಡಿ ಶೋಧ ಕಾರ್ಯ ನೆನ್ನೆ ರಾತ್ರಿ ಅಂತ್ಯ ವಾಗಿದ್ದು ಇಡಿ ದಾಳಿ ಕುರಿತು ಮಾಧ್ಯಗಳಿಗೆ ಪ್ರತಿಕ್ರೀಯೆ ನೀಡಿರುವ ಶಾಸಕ ನಂಜೇಗೌಡ ಎರಡು ದಿನ ನಡೆದ ಶೋದ ಕಾರ್ಯಕ್ಕೆ ನಾವು ಮತ್ತು ನಮ್ಮ ಕುಟುಂಬದವರು ಸಂಪೂರ್ಣವಾಗಿ ಸಹಕರಿಸಿದ್ದೇವೆ ಕೋಚಮುಲ್ ಡೈರಿ ನೇಮಕಾತಿ ಬಗ್ಗೆ ಮಾಹಿತಿ ಕೇಳಿದ ಅಧಿಕಾರಿಗಳು ಸಂಪೂರ್ಣ ಮಾಹಿತಿ ಪಡೆದಿದ್ದಾರೆ, ದರಕಾಸ್ತು ಸಮಿತಿ ಮೂಲಕ ಆಕ್ರಮ ಸಕ್ರಮ ಭೂ ಮಂಜೂರಾತಿ ವಿಚಾರವಾಗಿ ಮಾಹಿತಿ ಪಡೆದು ಕೊಂಡರು ಹಾಗೂ ನನ್ನ ಬ್ಯುಸಿನೆಸ್ ಬಗ್ಗೆ ಮಾಹಿತಿ ಕೇಳಿದ್ದು ಎಲ್ಲ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿ ಸಹಕಾರ ನೀಡಿದ್ದೇನೆ ತಮ್ಮ ಕುಟುಂಬ ಸಮೇತ ಇಡಿ ಗೆ ಸಹಕಾರ ನೀಡಲಾಗಿದೆ, ಕೆಲವರು ತಮ್ಮ ಬಗ್ಗೆ ಸಹಿಸದೆ ಇಡಿ ದಾಳಿ ಮಾಡಿಸಿದ್ದಾರೆ ಮಗಳ ಮದುವೆ ವೇಳೆ ಇಡಿ ದಾಳಿ ಮಾಡಿದ್ದು ನೋವಾಗಿದೆ.
ಮದುವೆಗೆ ಸಂಬಂದಿಸಿದಂತೆ ಎರಡು ದಿನದಲ್ಲಿ ಬಟ್ಟೆ ಖರೀದಿಗಾಗಿ ಇಟ್ಟಿದ ಹಣವನ್ನು ಇಡಿ ಜಪ್ತಿ ಮಾಡಿದ್ದಾರೆ ಮಗಳ ಮದುವೆಯ ಖರ್ಚುಗೆ ಸಹ ಹಣ ನೀಡದೆ ಇಡಿ ವಶಪಡಿಸಿಕೊಂಡಿದೆ ಇಡಿ ಅಧಿಕಾರಿಗಳ ಯಾವ ಸಂಧರ್ಭದಲ್ಲಿ ಮಾಹಿತಿ ಕೇಳಿದ್ರೆ ಮಾಹಿತಿ ನೀಡಲು ಇಡಿ ಅಧಿಕಾರಿಗಳಿಗೆ ತಿಳಿಸಿರುವೆ ಎಂದು ಶಾಸಕ ಕೆವೈ ನಂಜೇಗೌಡ ಪ್ರತಿಕ್ರಯೆ ನೀಡಿದ್ದಾರೆ.