ಟಾಲಿವುಡ್ ನಟ ಜ್ಯೂ. ಎನ್ಟಿಆರ್ ಅವರು ಕಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಮಾಡಲು ಜಪಾನ್ಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಜಪಾನ್ನಲ್ಲಿ ಭೂಕಂಪನ ಸಂಭವಿಸಿದೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ನಟ ಜ್ಯೂ.ಎನ್ಟಿಆರ್ ಅವರು ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಪುನೀತ್ ರಾಜ್ಕುಮಾರ್ ನಟನೆಯ ‘ಚಕ್ರವ್ಯೂಹ’ ಚಿತ್ರದಲ್ಲೂ ಹಾಡೊಂದನ್ನು ಹಾಡಿದ್ದಾರೆ. ತಾರಕ್ ನಟನೆಯ ‘RRR’ ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿತ್ತು. ‘ದೇವರ’ ಸಿನಿಮಾ ಮೂಲಕ ಮತ್ತೆ ಕನ್ನಡ ಸಿನಿಪ್ರೇಕ್ಷಕರ ಮುಂದೆ ಯಂಗ್ ಟೈಗರ್ ಬರುತ್ತಿದ್ದಾರೆ.

ಈ ವರ್ಷ ಫ್ಯಾಮಿಲಿ ಸಮೇತ ಜಪಾನ್ನಲ್ಲಿ ನಟ ಜ್ಯೂ.ಎನ್ಟಿಆರ್ ಕ್ರಿಸ್ಮಸ್ ಹಾಗೂ ಹೊಸ ವರ್ಷವನ್ನು ಆಚರಿಸಿದ್ದರು. ಪತ್ನಿ ಲಕ್ಷ್ಮಿ ಪ್ರಣತಿ ಮತ್ತು ಇಬ್ಬರು ಮಕ್ಕಳಾದ ಅಭಯ್ ಮತ್ತು ಭಾರ್ಗವ್ ಜೊತೆ ಜಪಾನ್ ಪ್ರವಾಸ ಕೈಗೊಂಡಿದ್ದರು. ಜಪಾನ್ನಲ್ಲಿ ಕೇವಲ 18 ಗಂಟೆಗಳಲ್ಲಿ 155 ಬಾರಿ ಭೂಮಿ ಕಂಪಿಸಿದೆ. ಈ ಭೂಕಂಪನದಲ್ಲಿ 13 ಮಂದಿ ಕೊನೆಯುಸಿರೆಳೆದಿರುವುದಾಗಿ ವರದಿಯಾಗಿದೆ.
ಜಪಾನ್ನ ಇಶಿವಾಕಾದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಈ ಭೂಕಂಪದ ತೀವ್ರತೆಗೆ ಕಟ್ಟಡಗಳು ಉರುಳಿ, ರಸ್ತೆಗಳು ಬಿರುಕುಬಿಟ್ಟಿದೆ. ವಿದ್ಯುತ್ ವ್ಯತ್ಯಯದಿಂದ ಜನ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಬಲ ಭೂಕಂಪನ ಸಂಭವಿಸಬಹುದು ಎಚ್ಚರದಿಂದಿರುವಂತೆ ಜನರಿಗೆ ತಿಳಿಸಲಾಗಿದೆ
ಸಂಕಷ್ಟಕ್ಕೆ ಸಿಲುಕಿದ ಪ್ರದೇಶಗಳಿಗೆ ರೈಲು, ವಿಮಾನ ಸಂಪರ್ಕ ಕಡಿತಗೊಂಡಿದೆ. ತೆಲುಗು ನಟ ಜ್ಯೂ. ಎನ್ಟಿಆರ್ ತಾಯ್ನಾಡಿಗೆ ವಾಪಸ್ ಆಗಲು ವಿಮಾನ ಏರಿದ ಬೆನ್ನಲ್ಲೇ ಭೂಕಂಪ ಸಂಭಂವಿಸಿದೆ. ಈ ಬಗ್ಗೆ ನಟ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. “ಇಂದು ಮನೆಗೆ ವಾಪಸ್ ಆಗಿದ್ದೇವೆ. ಇಂದು ಜಪಾನ್ ಭೂಕಂಪ ವಿಚಾರ ಆಘಾತ ತಂದಿದೆ. ಕಳೆದ ವಾರ ಪೂರ್ತಿ ಅಲ್ಲಿಯೇ ಕಳೆದೆವು. ಜಪಾನ್ ಜನತೆಯ ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಬರೆದುಕೊಂಡಿದ್ದಾರೆ,
ಸದ್ಯ ಜ್ಯೂ. ಎನ್ಟಿಆರ್ ಟ್ವೀಟ್ ವೈರಲ್ ಆಗುತ್ತಿದೆ. ತಮ್ಮ ನೆಚ್ಚಿನ ನಟ ಸುರಕ್ಷಿತವಾಗಿ ತಾಯ್ನಾಡಿಗೆ ಬಂದಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ತಾರಕ್ ಸದ್ಯ ಕೊರಟಾಲ ಶಿವ ನಿರ್ದೇಶನದ ‘ದೇವರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರಲಿದೆ. ‘RRR’ ರಿಲೀಸ್ ಆಗಿ ಒಂದು ವರ್ಷದ ಬಳಿಕ ಈ ಸಿನಿಮಾ ಶುರುವಾಗಿತ್ತು. ಸದ್ಯ ಭರದಿಂದ ಚಿತ್ರೀಕರಣ ಸಾಗುತ್ತಿದೆ. ಜನವರಿ 8ಕ್ಕೆ ಸಿನಿಮಾ ಟೀಸರ್ ರಿಲೀಸ್ ಪ್ಲ್ಯಾನ್ ನಡೀತಿದೆ. ‘ದೇವರ’ ಚಿತ್ರದಲ್ಲಿ ತಾರಕ್ ಜೋಡಿಯಾಗಿ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಸೈಫ್ ಅಲಿಖಾನ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ.