ಬೆಂಗಳೂರು: ಪ್ರಥಮ ಬಾರಿಗೆ ಸಂಸದರಾಗಿ ಆಯ್ಕೆಯಾದ ಬೊಮ್ಮಾಯಿ,ಸುಧಾಕರ್,ಮತ್ತು ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕೇಂದ್ರ ಸರ್ಕಾರ ದಸರಾ ಉಡುಗೊರೆ ನೀಡಿದೆ. ಕಾರ್ಮಿಕ ಜವಳಿ ಮತ್ತು ಕೌಶಲ್ಯ ಅಭಿವೃದ್ಧಿಸಮಿತಿ ಅಧ್ಯಕ್ಷರಾಗಿ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರಿಗೆ, ಕೇಂದ್ರ ಸರ್ಕಾರವು ಪ್ರಮುಖ ಹೊಣೆ ವಹಿಸಿದೆ. ಹೊಸದಾಗಿ ಸಂಸದೀಯ ಸ್ಥಾಯಿ ಸಮಿತಿಗಳಿಗೆ ಸಂಸದರನ್ನು ನೇಮಿಸಿದ್ದು, ಈ ಪೈಕಿ ಡಾ.ಕೆ.ಸುಧಾಕರ್ ರನ್ನು ಹಣಕಾಸು ಸಂಸದೀಯ ಸ್ಥಾಯಿ ಸಮಿತಿ ಸದಸ್ಯರಾಗಿದ್ದಾರೆ. ಪ್ರಥಮ ಬಾರಿಗೆ ಸಂಸದರಾಗಿರುವ ದಾವಣಗೆರೆಯ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಥಾಯಿ ಸಮಿತಿ ಸದಸ್ಯರಾಗಿ ನೇಮಿಸಲಾಗಿದೆ.
ಬೊಮ್ಮಾಯಿ,ಸುಧಾಕರ್ಗೆ ಕೇಂದ್ರದಿಂದ ದಸರಾ ಲಾಟರಿ!
RELATED ARTICLES