#Exclusive Newsರಾಜ್ಯ

ನಿಗಿ ನಿಗಿ ನಿಂಗಪ್ಪನ ಬಲೆಯಲ್ಲಿ 10 ಕೆಎಎಸ್ ಅಧಿಕಾರಿಗಳು.. ಗಡಗಡ

ಲೋಕಾಯುಕ್ತ ಹೆಸರಲ್ಲಿ ಮಾಜಿ ಪೇದೆ ನಿಂಗಪ್ಪ ಭರಪೂರ ಉಂಡೆದ್ದಿರುವುದು ಲೋಕಾಯುಕ್ತ ಎಸ್​ಪಿ ತನಿಖೆಯಲ್ಲಿ ಬಟಾಬಯಲಾಗಿದೆ.

ಕನಿಷ್ಠ 10 ಮಂದಿ ಕೆಎಎಸ್ ಅಧಿಕಾರಿಗಳಿಂದ ಹಣ ವಸೂಲಿ ಮಾಡಿರುವ ವಿಚಾರವನ್ನು ಹೆಸರುಗಳ ಸಮೇತ ಬಾಯ್ಬಿಟ್ಟಿದ್ದಾನೆ.

ಯಾರ್ಯಾರಿಂದ ಎಷ್ಟೆಷ್ಟು ಹಣವನ್ನು ಯಾವ್ಯಾವ ಕಾರಣ ನೀಡಿ ವಸೂಲಿ ಮಾಡಿದೆ ಎಂಬುದನ್ನು ಬಾಯ್ಬಿಟ್ಟಿದ್ದಾನೆ ನಿಗಿನಿಗಿ ನಿಂಗಪ್ಪ.

ಈ ಹಿನ್ನಲೆಯಲ್ಲಿ ಯಾವುದೇ ಕ್ಷಣದಲ್ಲಿ ಲಂಚ ಕೊಟ್ಟಿದ್ದ 10 ಕೆಎಎಸ್ ಅಧಿಕಾರಿಗಳಿಗೆ ಲೋಕಾಯುಕ್ತ ಎಸ್​ಪಿ ವಂಶಿಕೃಷ್ಣ ನೊಟೀಸ್ ಜಾರಿ ಮಾಡುವ ಸಂಭವ ಇದೆ. ಶೀಘ್ರವೇ ಈ 10 ಕೆಎಸ್ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.

ಇದೇ ವೇಳೆ,ಲೋಕಾಯುಕ್ತ ಹೆಸರಲ್ಲಿ ಸುಲಿಗೆ ಮಾಡಲು ಯಾವೆಲ್ಲಾ ಪೊಲೀಸ್ ಅಧಿಕಾರಿಗಳು ಸಹಕರಿಸಿದ್ರು ಎಂಬುದನ್ನು ವಿಚಾರಣೆ ವೇಳೆ ನಿಂಗಪ್ಪ ಬಟಾಬಯಲು ಮಾಡಿದ್ದಾರೆ. ಹೀಗಾಗಿ ಆ ಪೊಲೀಸ್ ಅಧಿಕಾರಿಗಳಿಗೂ ಲೋಕಾ ತನಿಖೆಯ ಬಿಸಿ ತಾಕುವುದು ಖಚಿತವಾಗಿದೆ.

ಲೋಕಾ ಹೆಸರಲ್ಲಿ ಬಿಡಿಎ, ಅಬಕಾರಿ ಅಧಿಕಾರಿಗಳಿಂದ ಸುಲಿಗೆಯನ್ನು ಮಾಡಲಾಗ್ತಿತ್ತು. ಹಣ ಕೊಡಿ ಇಲ್ಲ ಅಂದ್ರೆ ರೇಡ್‌ ಮಾಡ್ತೀವಿ ಅಂತ ಬ್ಲಾಕ್​ಮೇಲ್ ಮಾಡ್ತಿದ್ದರು. ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡ್ತಿದ್ದರು ತನಿಖೆಯ ಆಳಕ್ಕೆ ಇಳಿದಂತೆಲ್ಲಾ ಬ್ರಹ್ಮಾಂಡ ಭ್ರಷ್ಟಾಚಾರ ಅನಾವರಣವಾಗುತ್ತಿದೆ.

ನಿಂಗಪ್ಪ ಬಾಯ್ಬಿಡುತ್ತಿರುವ ಒಂದೊಂದು ವಿಚಾರವೂ ಗಂಭೀರ ಸ್ವರೂಪದ್ದಾದ ಕಾರಣ ಮೊದಲು ಯಾವ ಆಯಾಮದಲ್ಲಿ ತನಿಖೆ ನಡೆಸುವುದು ಎಂದು ತನಿಖಾ ತಂಡ ತಲೆಕೆಡಿಸಿಕೊಂಡಿದೆ.

ತನಿಖೆ ತೀವ್ರಗೊಳ್ತಿರುವಂತೆಯೇ ಲೋಕಾಯುಕ್ತ ಹೆಸರಿನಲ್ಲಿ ದಂಧೆ ನಡೆಸಿರುವ ಭ್ರಷ್ಟ ಅಧಿಕಾರಿಗಳಿಗೆ ನಡುಕ ಶುರುವಾಗಿದೆ ದಂಧೆಯಲ್ಲಿದ್ದ ಹಲವು ಬ್ರೋಕರ್​​ ಗಳು, ಮೀಡಿಯೇಟರ್​​ ಗಳಿಗೂ ಇದೀಗ ಸಂಕಷ್ಟ ಎದುರಾಗಿದೆ.

ಎಸ್ ಪಿ ಶ್ರೀನಾಥ್ ಜೋಶಿಯನ್ನು ಸೇವೆಯಿಂದ ಬಿಡುಗಡೆ ಮಾಡಿದ ಬೆನ್ನಲ್ಲೇ ಹಲವು ಅಧಿಕಾರಿಗಳು ಹೆದರಿ ಬೆಂಗಳೂರು ಬಿಟ್ಟಿದ್ದಾರೆ

Comments (0)

Your email address will not be published. Required fields are marked *

Back to top button