ಬಿಗ್ ಬಾಸ್ ಸ್ಪರ್ಧಿಗಳು ಒಂದಲ್ಲ ಒಂದು ವಿವಾದಗಳಲ್ಲಿ ಸುದ್ದಿಯಲ್ಲಿರುತ್ತಾರೆ ಆ ಪೈಕಿ ಹೆಚ್ಚು ಸುದ್ದಿಮಾಡಿದ್ದ ಡ್ರೋನ್ ಪ್ರಾತಾಪ್ ಈಗ ಮತ್ತೆ ಚರ್ಚೆಯಲ್ಲಿದ್ದಾರೆ,ಕೊರೋನ ಲಾಕ್ ಡೌನ್ ಸಂದರ್ಭ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಆಗಿನ ನೋಡೆಲ್ ಅಧಿಕಾರಿಯಾಗಿದ್ದ ಡಾ.ಪ್ರಯಾಗ್ ರಿಂದ ವಿಚಾರಣೆ ಎದುರಿಸಿದ್ದ ಡ್ರೋನ್ ಪ್ರತಾಪ್.
ಬಿಗ್ ಬಾಸ್ ಸ್ಪರ್ಧಿಯಾದ ಬಳಿಕ ಬಿಗ್ ಬಾಸ್ ಮನೆಯಲ್ಲಿ ಜೀವನದಲ್ಲಿ ಎದುರಿಸಿರೋ ಕೆಟ್ಟ ಕ್ಷಣಗಳನ್ನ ಹಂಚಿಕೊಳ್ಳೋ ಟಾಸ್ಕ್ ಒಂದರಲ್ಲಿ ಡ್ರೋನ್ ಪ್ರತಾಪ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಎದುರಿಸಿದ್ದ ವಿಚಾರಣೆಯಲ್ಲಿ ಅಧಿಕಾರಿಯೊಬ್ಬರು ನನ್ನನ್ನ ಪೀಡಿಸಿದ್ದರು ಮತ್ತು ಸುಖಾಸುಮ್ಮನೆ ಹೊಡೆದಿದ್ದರೂ ಎಂದು ಆರೋಪ ಮಾಡಿದ್ದ ಡ್ರೋನ್ ಪ್ರತಾಪ್ ವಿರುದ್ಧ ಆಗಿನ ನೋಡೆಲ್ ಅಧಿಕಾರಿ ಪಶು ವೈದ್ಯ ಡಾ.ಪ್ರಯಾಗ್ ಪ್ರತಾಪ್ ವಿರುದ್ಧ ಮಾನ ನಷ್ಟ ಮೊಕದ್ದಮೆ ದಾಖಲಿಸಿದ್ದರು .
ಈಗ ಡ್ರೋನ್ ಪ್ರತಾಪ್ ಸಂಕಷ್ಟ ಎದುರಾಗಿದೆ , ಬಿಗ್ ಬಾಸ್ ಮನೆಯಲ್ಲಿ ಆರೋಪ ಮಾಡಿದ್ದ ಹಿನ್ನೆಲೆ ಫೆ.೨೦ರಂದು ಕೋರ್ಟ್ ಗೆ ಹಾಜರಾಗುವಂತೆ ಸಮನ್ಸ್ ಜಾರಿಯಾಗಿದ್ದು ,ಡಾ.ಪ್ರಯಾಗ್ ಈ ಬಗ್ಗೆ ಪ್ರತಿಕ್ರಿಯಿಸಿ ಕಾನೂನು ಹೋರಾಟ ನಿರಂತರವಾಗಿರುತ್ತೆ ಮತ್ತು ಆತ ನಿರಪರಾಧಿಯಾಗಿದ್ದಲ್ಲಿ ನ್ಯಾಯಾಲಯದಲ್ಲಿ ಸಾಬೀತು ಪಡಿಸಲಿ ಎಂದಿದ್ದಾರೆ.