ಖಾಸಗಿ ಬಸ್ ಚಾಲಕನೊಬ್ಬ ಕಂಡಕ್ಟರ್ ಗೆ ಚಾಕುವಿನಿಂದ ಇರಿದ ಘಟನೆ ತಿರುವನಂತಪುರಂನಲ್ಲಿ ನಡೆದಿದೆ. ಬಸ್ ನಲ್ಲಿ ಕುಳಿತಿದ್ದ ಕಂಡಕ್ಟರ್ ಬಿನೋಜ್ ಮೇಲೆ ಚಾಲಕ ಬಾಬುರಾಜ್ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಕಂಡಕ್ಟರ್ ಬಿನೋಜ್ ತಕ್ಷಣ ಪ್ರತಿರೋಧ ತೋರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕಡೆಗೆ ಮೂರನೇ ವ್ಯಕ್ತಿ ಬಂದು ಬಿನೋಜ್ ನನ್ನು ರಕ್ಷಣೆ ಮಾಡುತ್ತಾರೆ.
ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುವವನಿಗೆ ವಾಹನ ಚಲಾಯಿಸಲು ಅವಕಾಶ ನೀಡಿದ ಬಗ್ಗೆ ಚಾಲಕ ಬಾಬುರಾಜು ಸಿಟ್ಟಾಗಿದ್ದರು. ಹೀಗಾಗಿ ಬಿನೋಜ್ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ತಿರುವನಂತಪುರ ಫೋರ್ಟ್ ಪೊಲೀಸರು ಆರೋಪಿ ಬಾಬುರಾಜ್ ನನ್ನು ಬಂಧಿಸಿದ್ದಾರೆ. ಗಾಯಾಳು ಬಿನೋಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ವೀಡಿಯೋ ವೈರಲ್ ಆಗಿದೆ