ಜಿಲ್ಲೆಧರ್ಮ

ಮುಸ್ಲಿಮರಿಂದ ರಾಮ ಯಾತ್ರೆಗೆ ಚಾಲನೆ

ಶ್ರೀರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಸಂಭ್ರಮ ದೇಶದಲ್ಲಿ ಕಳೆಕಟ್ಟಿದೆ,ದೇಶದ ನಾನಾ ರಾಜ್ಯಗಳಲ್ಲಿ ಇಂದು ಶ್ರೀರಾಮನ ಭವ್ಯ ಮೆರವಣಿಗೆ ನಡೆಯುತ್ತಿದ್ದು ,ಜೈ ಶ್ರೀರಾಮ್ ಘೋಷಣೆ ಮೂಲಕ ಪುಷ್ಪಗಳನ್ನ ರಸ್ತೆಯುದ್ದಕ್ಕೂ ಚೆಲ್ಲಿ ಉದ್ದುದ್ದ ಮೆರವಣಿಗೆಗಳು ರಾಮಭಕ್ತರ ಗಮನ ಸೆಳೆದಿದೆ.

ವಿಶೇಷವಾಗಿ ಶ್ರೀರಾಮನ ಶೋಭಾಯಾತ್ರೆಗೆ ಮುಸಲ್ಮಾನ ಬಾಂಧವರು ಕೂಡ ಸಾಕಷ್ಟು ಕಡೆಗಳಲ್ಲಿ ಯಾತ್ರೆಗೆ ಚಾಲನೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಂತ್ರಾಲಯ ಮಠದಲ್ಲಿ ಕೂಡ ಸಂಭ್ರಮ ಕಳೆಕಟ್ಟಿದೆ. ಮಂತ್ರಾಲಯದ ರಾಜಬೀದಿಗಳಲ್ಲಿ ಪೀಠಾಧಿಪತಿ ಸುಭುದೇಂದ್ರ‌ ತೀರ್ಥ ಶ್ರೀಗಳ ನೇತೃತ್ವದಲ್ಲಿ ಶೋಭಾಯಾತ್ರೆ ನಡೆಯಲಿದೆ. ಮೊದಲು ಶ್ರೀಗಳಿಂದ ಚಾಲನೆ ನೀಡಲಾಗಿದ್ದು, ಬಳಿಕ ಮುಸಲ್ಮಾನ ಬಾಂಧವರಿಂದ ಯಾತ್ರೆಗೆ ಚಾಲನೆ ದೊರೆತಿದೆ ,ಮಂತ್ರಾಲಯದಲ್ಲಿ ನಡೆಯುತ್ತಿರೋ ಶ್ರೀರಾಮನ ಭವ್ಯ ಮೆರವಣಿಗೆ ವೈಭವ ದೇಶದ ಜನರನ್ನ ಆಕರ್ಷಿಸುತ್ತಿದೆ .

ಗಂಗಾ ನದಿಯ ಉಪನದಿಯಾದ ಸರಯೂ ನದಿಯ ತಟದಲ್ಲಿರುವ ಅಯೋಧ್ಯೆ ನಗರವನ್ನು ವಿಶ್ವದರ್ಜೆಯ ನಗರವಾಗಿ ಮಾರ್ಪಡಲಿ ಎಂದು ಭಕ್ತಾಧಿಗಳಿಂದ ಪ್ರಾರ್ಥನೆ ನಡೆಯುತ್ತಿದ್ದು ,ಬಾಲರಾಮನ ಪ್ರತಿಷ್ಠಾಪನೆಯ ನಂತರ ಭಕ್ತರ ಹಾಗೂ ಪ್ರವಾಸಿಗರ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಿ ಅಯೋಧ್ಯೆ ದೇಶದ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿ ಮಾರ್ಪಡಲಿದೆ ಅನ್ನೋ ಅಸಂಖ್ಯಾತ ಭಕ್ತರ ಅಭಿಪ್ರಾಯ ಶೋಭಾಯಾತ್ರೆಯಲ್ಲಿ ಸೇರಿದ್ದ ಜನರಿಗೆ ಉತ್ಸಾಹ ತಂದು ಕೊಟ್ಟಿತು.

ಜಾಗತಿಕ ನಕಾಶೆಯಲ್ಲಿ ಹಿಂದೂ ಸಂಸ್ಕೃತಿಯ ದೇವಾಲಯಗಳ ಪೈಕಿ ಅಯೋಧ್ಯೆ ಅಗ್ರಗಣ್ಯ ಸ್ಥಾನದಲ್ಲಿರಲು ಮಂತ್ರಾಲಯದ ಭಕ್ತಾಧಿಗಳ ಪ್ರಾರ್ಥನೆಯು ನೆರೆವೇರಿತು,ಒಟ್ಟಾರೆ ಶ್ರೀರಾಮನ ಜಪ ದೇಶದ ತುಂಬೆಲ್ಲ ಕೇಳಿಸುತ್ತಿರುವುದು ,ಅಯೋಧ್ಯೆ ಸಂಭ್ರಮಕ್ಕೆ ಕಳೆ ತಂದುಕೊಟ್ಟಿದೆ.

Comments (0)

Your email address will not be published. Required fields are marked *

Back to top button