ನವದೆಹಲಿ :ನೈಜ ನಗದು ಬಳಸಿ ಆಡುವ ಆನ್‌ಲೈನ್ ಗೇಮ್ ಗಳಿಗೆ ಕೇಂದ್ರ ಸರಕಾರ ನಿರ್ಬಂಧ ವಿಧಿಸಿದೆ.ಹೀಗಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಜೆರ್ಸಿ ಪ್ರಾಯೋಜಕತ್ವ ನೀಡುತ್ತಿದ್ದ ಡ್ರೀಮ್ 11 ಒಪ್ಪಂದದಿಂದ ಹಿಂದೆ ಸರಿದಿದೆ.
ಈ ಕುರಿತು ಡ್ರೀಮ್11 ಬಿಸಿಸಿಐಗೆ ಮಾಹಿತಿ ನೀಡಿದ್ದು,ಇನ್ನು ಮುಂದೆ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಾಯೋಜಕತ್ವ ವಹಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.ಈ ಮೂಲಕ ಸೆಪ್ಟೆಂಬರ್ 9ರಿಂದ ಆರಂಭವಾಗಲಿರುವ ಏಷ್ಯಾಕಪ್‌ಗೆ ಬೇರೆ ಹೊಸ ಪ್ರಾಯೋಜಕರ ಅವಶ್ಯಕತೆಯಿದೆ.
18 ವರ್ಷಗಳ ಹಿಂದೆ ಆರಂಭವಾಗಿದ್ದ ಡ್ರೀಮ್11 ಸಂಸ್ಥೆ 2023ರ ಜುಲೈನಲ್ಲಿ ಬಿಸಿಸಿಐ ಪ್ರಾಯೋಜಕತ್ವವನ್ನು 3 ವರ್ಷದ ಅವಧಿಗೆ ಬರೋಬ್ಬರಿ 358 ಕೋಟಿ ರೂ.ಗೆ ಪಡೆದುಕೊಂಡಿತ್ತು. ಒಪ್ಪಂದದ ಅವಧಿ ಮುಂಬರುವ 2026ರ ಜುಲೈ ತಿಂಗಳವರೆಗೆ ಇದ್ದರೂ ಕೂಡ 1 ವರ್ಷಕ್ಕೂ ಮುಂಚೆ ಸಂಸ್ಥೆ ಪ್ರಾಯೋಜಕತ್ವವನ್ನು ತೊರೆದಿದೆ.