ಚಿಕ್ಕಬಳ್ಳಾಪುರ: ಕೇಂದ್ರದಲ್ಲಿ ಮೋದಿ ಗ್ಯಾರೆಂಟಿ ಯೋಜನೆಗಳ ರೀತಿಯಲ್ಲಿ ನನ್ನದೊಂದು ಯೋಜನೆ ಇದೇ ಎಂದು ಡಾ.ಕೆ ಸುಧಾಕರ್ ಹೇಳಿದರು.
ಪ್ರಣಾಳಿಕೆ ಬಿಡುಗಡೆ ಮಾಡಿ ಸುದ್ದಿಗೋಷ್ಟಿ ಆರಂಭಿಸಿದ ಅವರು, ಸ್ಥಳೀಯವಾಗಿ ನಾನು ನನ್ನ ಕ್ಷೇತ್ರದ ಜನರಿಗೆ ಏನೆಲ್ಲಾ ಯೋಜನೆಗಳು ತರ್ತೀನಿ ಅನ್ನೋದನ್ನು ಮಾತನಾಡಿದರು.
ಹಲವು ಮಹತ್ವದ ಯೋಜನೆಗಳು ಕ್ಷೇತ್ರಕ್ಕೆ ತರುವ ಉದ್ಧೇಶವಿದೆ. ಹೂವಿನ ಬೋರ್ಡ್ ಚಿಕ್ಕಬಳ್ಳಾಪುರದಲ್ಲಿ ಸ್ಥಾಪನೆ ಮಾಡುತ್ತೆನೆ, ಇದು ಕಾಫಿ ಬೋರ್ಡ್ ರೀತಿಯಲ್ಲಿ ಕೆಲಸ ನಿರ್ವಹಿಸಲಿದೆ. ಇಎಸ್ಐ ಸೇವಾ ಸೌಲಭ್ಯ ಇರುವ ಆಸ್ಪತ್ರೆಯನ್ನು ಬೆಂಗಳೂರು ಗ್ರಾಮಾಂತರದಲ್ಲಿ ಸ್ಥಾಪನೆ ಮಾಡುತ್ತೇನೆ ಎಂದರು.
ಪೆರೇಸಂದ್ರದಲ್ಲಿ ಪರಿಪೂರ್ಣ ಆರೋಗ್ಯ ಕೇಂದ್ರ- ಆರೋಗ್ಯ ನಗರ ರೂಪಿಸಲು ಯೋಜನೆ. ಐಐಟಿ ಮುದ್ದೇನಹಳ್ಳಿ ಭಾಗದಲ್ಲಿ ಮಾಡುವ ಮೂಲಕ ಸರ್ ಎಂ ವಿಗೆ ಗೌರವ ತರುವ ಪ್ರಾಮಾಣಿಕ ಪ್ರಯತ್ನ ಮಾಡುವೆ, ಸಚಿವನಾಗಿದ್ದಾಗ ಹತ್ತು ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಿದ್ದೆ ಕೇಂದ್ರ ವೈಧ್ಯಕೀಯ ಕಾಲೇಜು ಚಿಕ್ಕಬಳ್ಳಾಪುರಕ್ಕೆ ತರುವ ಪ್ರಯತ್ನ, ಬೆಂಗಳೂರು ನಗರದ ಸಂಚಾರ ದಟ್ಟಣೆ ತಪ್ಪಿಸಲು ಪರ್ಯಾಯವಾಗಿ ಬೆಂಗಳೂರು ಗ್ರಾಮಾಂತರ ದಲ್ಲಿ ಸ್ಯಾಟಿಲೈಟ್ ನಗರಗಳಾಗಿ ಅಭಿವೃದ್ಧಿ, ರೈಲ್ವೆ ಸಂಪರ್ಕ ಈ ಭಾಗದಲ್ಲಿ ಅತಿ ಕಡಿಮೆ ಇದೆ. ಸರ್ಕೂಲರ್ ರೈಲ್ವೆ ನೆಟ್ ವರ್ಕ್ ಮೂಲಕ ರೈಲ್ವೆ ಸಂಚಾರ ಸುಮಾರು 12 ರೈಲುಗಳ ಸಂಚಾರ ಬೇಡಿಕೆ ಇದೆ ಇದನ್ನು ಪರಿಪೂರ್ಣಗೊಳಿಸಬೇಕಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ ಕೆ ಸುಧಾಕರ್ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಮಹಿಳೆಯರ ಸಬಲೀಕರಣಕ್ಕೆ 20 ಸಾವಿರಕ್ಕೂ ಹೆಚ್ಚು ಸಂಘಗಳ ರಚನೆ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 50 ಮನೆಗಳ ನಿರ್ಮಾಣ ಯೋಜನೆ, ಹೆಚ್ಚು ಉದ್ಯೋಗ ನೀಡುವ ಕೈಗಾರಿಕೆ ಸ್ಥಾಪನೆ, ವೈಟ್ ಫೀಲ್ಡ್ ಮಾದರಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಐಟಿ ಹಬ್ ನಿರ್ಮಾಣ, ಅಲೋಪತಿ, ಆಯುರ್ವೇದ ದಲ್ಲಿ ಸಂಶೋಧನೆ ಕೇಂದ್ರಗಳು ಮಾಡಲಾಗುವುದು ಎಂದರು.


