ಚಿತ್ರದುರ್ಗ; ಸಿರಿಗೆರೆ ಮತ್ತು ಸಾಣೆಹಳ್ಳಿ ನಂಬಿಕೆಯ ಜಗತ್ತಿನ ಎರಡು ಕಣ್ಣುಗಳಿದ್ದಂತೆ ಅದ್ರೆ ಇಂದು ಒಂದು ಕಣ್ಣು ಉತ್ತರಕ್ಕೆ ನೋಡಿದರೆ ಮತ್ತೊಂದು ಕಣ್ಣು ದಕ್ಷಿಣಕ್ಕೆ ನೋಡುತ್ತಿದೆ. ಇದು ಚಿತ್ರದುರ್ಗ ಜಿಲ್ಲೆಯ ತರಳಬಾಳು ಮಠ ಮತ್ತು ಸಾಣೆಹಳ್ಳಿ ಮಠದ ಕಥೆ.ಇಬ್ಬರ ಸ್ವಾಮಿಗಳ ಒಳ ಜಗಳದ ಕಥೆ.
ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯರು ಹಾಗೂ ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಗಳ ನಡುವಿನ ಭಿನ್ನಾಭಿಪ್ರಾಯ ಭಕ್ತರನ್ನ ಆತಂಕಕ್ಕೆ ತಳ್ಳಿದೆ.ಡಾ. ಶಿವಮೂರ್ತಿ ಶಿವಾಚಾರ್ಯರ ಶಿಷ್ಯರೇ ಪಂಡಿತಾರಾಧ್ಯ ಸ್ವಾಮಿಗಳು. ಆದ್ರೆ ಈ ಗುರು ಶೀಷ್ಯರ ವೈಮನಸ್ಸು ಬೀದಿಗೆ ಬಂದಿದೆ.
ಹೆಸರಾಂತ ಮಠವಾಗಿರುವ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಮಠದ ಹಿರಿಯ ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಮತ್ತು ಶಿಷ್ಯರಾದ ಹೊಸದುರ್ಗದ ಶಾಖಾ ಮಠದ ಡಾ. ಪಂಡಿತಾರಾಧ್ಯ ಸ್ವಾಮೀಜಿಗಳ ನಡುವೆ ಬಿನ್ನಾಭಿಪ್ರಾಯ ಉಂಟಾಗಿ ಪಂಡಿತಾರಾಧ್ಯ ಶ್ರೀಗಳನ್ನು ದೂರವಿಟ್ಟಿದ್ದಾರೆ.ಸಿರಿಗೆರೆ ಮಠಕ್ಕೆ ಬರದಂತೆ ಪಂಡಿತಾರಾಧ್ಯರಿಗೆ ಸೂಚನೆ ನೀಡಲಾಗಿದೆ ಎಂಬುದು ಮೂಲಗಳ ಹೇಳಿಕೆ.

ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಸಂಪ್ರದಾಯದ ಅನುಸಾರ ಮಠವನ್ನ ನಡೆಸಿಕೊಂಡು ಬರುತ್ತಿದ್ದಾರೆ ಸಾಣೆಹಳ್ಳಿ ಸ್ವಾಮಿಯ ದಾರಿಯೇ ಬೇರೆ. ಪಂಡಿತಾರಾಧ್ಯರು ಸಾಣೆಹಳ್ಳಿ ಮಠವನ್ನ ವೈಞ್ನಾನಿಕ ನಂಬಿಕೆ ಆಧುನಿಕ ಸಂಸ್ಕೃತಿಯನ್ನ ಸಮಿಕರಿಸಿ ನಡೆಸಿಕೊಂಡು ಬರುತ್ತಿರುವವರು.ಬಸವಣ್ಣನವರ ತತ್ವದರ್ಶಗಳನ್ನ ಪಾಲಿಸುತ್ತಿರುವವರು ಇದೇ ಇಬ್ಬರ ನಡುವಿನ ವೈಮನಸ್ಸಿಗೆ ಕಾರಣ.
ಇವರ ನಡುವಿನ ವೈಮನಸ್ಸು ಭಹಿರಂಗವಾದ್ದದ್ದು ಇತ್ತೀಚೆಗೆ, ಸಾಣೆಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವ ಸಂಧರ್ಭದಲ್ಲಿ ಪಂಡಿತಾಧ್ಯರು ಹೇಳಿದ ಒಂದು ಮಾತು ಮತ್ತೆ ವೈಮನಸ್ಸು ಭಹಿರಂಗವಾಗುವಂತೆ ಮಾಡಿತು.ಲಿಂಗಾಯುತರು ತಾವು ವ್ಯವಸ್ಥೆ ಮಾಡುವ ಕಾರ್ಯಕ್ರಮಗಳಲ್ಲಿ ಗಣೇಶ ಸ್ತುತಿ ಮಾಡುವುದು ಸರಿಯಲ್ಲ,ಇದಕೆ ಬದಲಾಗಿ ವಚನಗಾಯನ ಮಾಡುಬೇಕು ಎಂದು ಪಂಡಿತಾಧ್ಯರು ಹೇಳಿದ್ದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿರಿಗೆರೆ ಸ್ವಾಮೀಜಿ ಗಣೇಗ ಸ್ತುತಿಯನ್ನ ಸಮರ್ಥಿಸಕೊಂಡಿದ್ದರು.

ಹಾಗೇ ನೋಡಿದರೆ ಇವರಿಬ್ಬರ ನಡುವಿನ ಭಿನ್ನಭಿಪ್ರಾಯ ಹೊರ ಬಂದಿದ್ದು ಮೊದಲ ಬಾರಿಯೇನೂ ಅಲ್ಲ.ಇವರ ನಡುವಿನ ಸಂಭಂದ ಬೂದಿ ಮುಚ್ಚಿದ ಕೆಂಡದಂತೆ ಇದೆ. ಸಾಣೇಹಳ್ಳಿ ಶ್ರೀಗಳು ಮಠದ ಪರಂಪರೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದು ಸಿರಿಗೆರೆ ಸ್ವಾಮೀಜಿಗಳ ಆರೋಪ. ಸಿರಿಗೆರೆ ಸ್ವಾಮೀಜಿಗಳು ಬಸವ ತತ್ವವನ್ನು ಸರಿಯಾಗಿ ಅನುಸರಿಸುತ್ತಿಲ್ಲ ಎನ್ನುವುದು ಪಂಡಿತರಾಧ್ಯಾರ ದೂರು ಇದೇ ಇಬ್ಬರ ನಡುವಿನ ವೈಮನಸ್ಸಿನ ಮೂಲ.
ಇದು ಎರಡು ಮಠಗಳ ಭಕ್ತರಲ್ಲಿ ಬೇಸರ ಮತ್ತು ಗೊಂದಲ ಉಂಟುಮಾಡಿದೆ. ಇದು ಯಾವ ಹಂತವನ್ನು ತಲುಪಿದೆ ಎಂದರೆ ಇಬ್ಬರು ಸ್ವಾಮೀಗಳು ಒಂದೇ ವೇದಿಕೆಯನ್ನು ಹಂಚಿಕೊಳ್ಳುತ್ತಿಲ್ಲ. ಒಬ್ಬರು ಪಾಲ್ಗೋಂಡ ಕಾರ್ಯಕ್ರಮದಲ್ಲಿ ಇನ್ನೊಬ್ಬರು ಪಾಲ್ಗೋಳ್ಳುತ್ತಿಲ್ಲ. ಇದರಿಂದ ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ.ತಮ್ಮ ಆಕ್ರೋಶವನ್ನು ವ್ತಕ್ತಪಡಿಸುತ್ತಿದ್ದಾರೆ. ಇಬ್ಬರು ಸ್ವಾಮೀಗಳು ಒಂದಾಗಿ ಕೆಲಸ ಮಾಡಬೇಕು ಎನ್ನುವುದು ಭಕ್ತರ ಆಶಯ. ಅದರೆ ಸೈಧಾಂತಿಕ ಭಿನ್ನಾಭಿಪ್ರಾಯದಿಂದಾಗಿ ಇಬ್ಬರು ಸ್ವಾಮೀಗಳು ಒಂದಾಗುತ್ತಾರೆ ಎಂದು ಹೇಳುವುದು ಕಷ್ಟ.