ನಿವೃತ್ತ ಐಎಎಸ್ ಅಧಿಕಾರಿ, ಕನ್ನಡಿಗ ಡಾ.ಜಿ.ಸಿ ಪ್ರಕಾಶ್ ಅವರನ್ನು ಅಲಹಾಬಾದ್ ಹೈಕೋರ್ಟ್, ಉತ್ತರ ಪ್ರದೇಶದ ಹೈಪವರ್ ಕಮಿಟಿಯೊಂದಕ್ಕೆ ಅಧ್ಯಕ್ಷರಾಗಿ ನೇಮಕ ಮಾಡಿದೆ.
ಸಮಗ್ರ ಶಿಶು ಅಭಿವೃದ್ಧಿ (ಐಸಿಡಿಎಸ್) ಯೋಜನೆಯನ್ನು ಸಮರ್ಪಕವಾಗಿ ಮತ್ತು ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ರಚಿಸಲಾಗಿರುವ ಹೈಪವರ್ ಕಮಿಟಿಗೆ ಕನ್ನಡಿಗರೊಬ್ಬರು ನೇಮಕಗೊಂಡಿದ್ದಾರೆ.
ಬೆಂಗಳೂರು ನಗರ ಡಿಸಿ, ಸಮಾಜ ಕಲ್ಯಾಣ ಇಲಾಖೆ ಕಮೀಷನರ್, ಎಂಎಸ್ಐಎಲ್ ಎಂಡಿ , ಸಕ್ಕರೆ ಇಲಾಖೆಯ ಕಮೀಷನರ್, ಬಿಡಿಎ ಕಮೀಷನರ್.. ಮೈಸೂರು ಪ್ರಾದೇಶಿಕ ಆಯುಕ್ತರು , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಇಲಾಖೆಯ ಕಾರ್ಯದರ್ಶಿ ಸೇರಿ ವಿವಿಧ ಹುದ್ದೆಗಳಲ್ಲಿ ಡಾ.ಜಿ.ಸಿ.ಪ್ರಕಾಶ್ ಸೇವೆ ಸಲ್ಲಿಸಿದ್ದರು.
ಮುಖ್ಯವಾಗಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಯಶಸ್ವಿ ಅನುಷ್ಠಾನದಲ್ಲಿ ಡಾ.ಜಿಸಿ ಪ್ರಕಾಶ್ ಪ್ರಮುಖ ಪಾತ್ರ ವಹಿಸಿದ್ದರು. ಎಲ್ಲೆಡೆ ಜನಪರವಾಗಿ ಮತ್ತು ಕೆಲಸ ಮಾಡಿದ ಎಲ್ಲಾ ಇಲಾಖೆಗಳಲ್ಲಿ ಯಶಸ್ವಿಯಾಗಿ ಯೋಜನೆಗಳ ಅನುಷ್ಠಾನ ಮಾಡಿರುವ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ಡಾ.ಜಿಸಿ ಪ್ರಕಾಶ್ ಅವರ ಸೇವೆಯನ್ನು ಬಳಸಿಕೊಂಡಿದೆ.
ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಉತ್ತರ ಪ್ರದೇಶದ 2.2 ಕೋಟಿ ಅರ್ಹ ಫಲಾನುಭವಿಗಳಿಗೆ ಐಸಿಡಿಎಸ್ ಯೋಜನೆ ಲಾಭ ಒದಗಿಸಿಕೊಡುವ ಜವಾಬ್ದಾರಿ ಡಾ.ಜಿ.ಸಿ.ಪ್ರಕಾಶ್ ಅವರ ಮೇಲಿದೆ.
ಹೈಪವರ್ ಕಮಿಟಿಗೆ ಡಾ.ಜಿಸಿ ಪ್ರಕಾಶ್ ಅಧ್ಯಕ್ಷರಾಗಿದ್ದರೇ, ಕೇಂದ್ರ ಸರ್ಕಾರದ ಹಿರಿಯ ಸೈಂಟಿಸ್ಟ್ ಡಾ.ಎನ್ ಜಿ ಮಲ್ಲೇಶಿ ಮತ್ತು ಪ್ರೊಫೆಸರ್ ರಾಕೇಶ್ ಕುಮಾರ್ ಶರ್ಮಾ ಅವರು ಸದಸ್ಯರಾಗಿದ್ದಾರೆ