ತುಮಕೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ದಾರಿ ತಪ್ಪಿದ ಮಗ, ನನಗೆ ಮೋಸ ಮಾಡಿದ್ದು ಹೇಳಿದರೇ ನಮ್ಮಪ್ಪನ ಹಣೆ ಅವನಿಗೆ ವೋಟ್ ಹಾಕೋಲ್ಲ ಎಂದು ಎಸ್.ಆರ್.ಶ್ರೀನಿವಾಸ್ ವಾಗ್ದಾಳಿ ನಡೆಸಿದರು.
ಕುಂಚಿಟಿಗ ಒಕ್ಕಲಿಗ ಸಭೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮೇಲೆ ತೀವ್ರವಾದ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ನೇತೃತ್ವದಲ್ಲಿ ಗ್ಯಾರಂಟಿ ಕೊಟ್ಟಿರೋದು ಬಡವರಿಗೆ. ಯಾರು ಅನುಭವಿಸುತ್ತಿದ್ದಾರೆ ಅವರಿಗೆ ಅದರ ಪ್ರಯೋಜನ ಗೊತ್ತು. ಕುಮಾರಸ್ವಾಮಿ ಹೇಳ್ತಾರೆ ತಾಯಂದಿರು ದಾರಿತಪ್ಪಿದ್ದಾರೆ ಅಂತಾ.ಯಾರು ದಾರಿ ತಪ್ಪಿರೋದು..? ದಾರಿ ತಪ್ಪಿದ ಮಗ ನೀನು, ನನಗೆ ಗೊತ್ತಿದೆ ಹೇಗೆ ದಾರಿ ತಪ್ಪಿದ್ದೀಯಾ ಅಂತಾ ಚರ್ಚೆಗೆ ಬಾ ಹೇಳ್ತೀನಿ ಎಂದು ಕಿಡಿಕಾರಿದರು.
ಅದ್ಯರೋ ಒಬ್ಬಳನ್ನು ಕಟ್ಟಿಕೊಂಡು ನಾನು ಕಟ್ಟಿಕೊಂಡಿದ್ದೀನಿ ಅಂತಾ ವಿಧಾನ ಸೌಧದಲ್ಲಿ ಹೇಳಿದರು. ದಾರಿ ತಪ್ಪಿರೊದು ಯಾರು..? ಇನ್ನೂ ಅವರ ಹಿಂದೆನೇ ಹೋಗ್ತಿರಲ್ಲರೀ ದಾರಿ ತಪ್ಪಿದ ಮಗನ ಹಿಂದೆ ಹೋಗ್ತಿರಾ ಎಂದರು.
ನಮ್ಮ ಹೆಣ್ಣು ಮಕ್ಕಳು ಹೇಂಗೋ ಗಂಡನ ಜೊತೆ ಸಂಸಾರ ಮಾಡ್ತಾವರೆ.ಇಡೀ ಹೆಣ್ಣು ಜಾತಿಗೆ ಅವಮಾನ ಮಾಡೋ ರೀತಿಯಲ್ಲಿ ಕುಮಾರಸ್ವಾಮಿ ಹೇಳ್ತಾರೆ. ದಾರಿತಪ್ಪಿದ ಮಗ ಕುಮಾರಣ್ಣ ಅವನನ್ನ ಫಾಲೋ ಮಾಡೋ ಕೆಲಸ ಮಾಡಬೇಡಿ ಎಂದು ನುಡಿದರು.