ರಾಜಕೀಯರಾಜ್ಯಸುದ್ದಿ

ಕೋಳಿ, ಕುರಿ, ಚಿನ್ನ ಇದ್ಯಾ ಎಂದು ಕೇಳ್ಬೇಡಿ.. ಗಣತಿ ಅಧಿಕಾರಿಗಳಿಗೆ ಡಿಕೆ ತಾಕೀತು

ಬೆಂಗಳೂರು: ಜಾತಿ ಗಣತಿ ಸರ್ವೇ ವೇಳೆ ಕೋಳಿ, ಕುರಿ, ಚಿನ್ನ, ವಾಚ್​​​​ ಇದ್ಯಾ ಎಂದು ಕೇಳ್ಬೇಡಿ ಅಂತಾ ಗಣತಿ ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್​ ತಾಕೀತು ಮಾಡಿದ್ದಾರೆ..

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರಲ್ಲಿ ಆ ರೀತಿ ಕೇಳಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಿಮಗೆ ಏನು ಉತ್ತರ ಕೊಡಬೇಕೋ ಅದಕ್ಕೆ ಉತ್ತರ ಕೊಡಿ. ಕೊಡಬಾರದು ಅನ್ನಿಸಿದರೆ ಕೊಡಬಾರದು. ಎಷ್ಟು ವಾಚ್, ಎಷ್ಟು ಚಿನ್ನ ಇದೆ, ಎಷ್ಟು ಫ್ರಿಡ್ಜ್ ಇದೆ ಅದೆಲ್ಲ ಕೇಳಬೇಡಿ. ಅದು ಅವರ ಪರ್ಸನಲ್ ಬಿಟ್ಟು ಬಿಡಿ ಎಂದು ಅಧಿಕಾರಿಗಳಿಗೂ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಯಾರು ಬೇಕಾದರೂ ಅಪೇಕ್ಷೆಪಡಲಿ. ಕೋರ್ಟ್ ಹೇಳಿದೆ, ಏನು ಬೇಕೋ ಅದಕ್ಕೆ ಮಾತ್ರ ಉತ್ತರ ನೀಡಿ. ಆದರೆ ಸಮೀಕ್ಷೆ ವಿರೋಧ ಮಾಡೋದರಲ್ಲಿ ಅರ್ಥ ಇಲ್ಲ, ಎಲ್ಲರೂ ಭಾಗಿಯಾಗಬೇಕು. ಇಲಾಖೆಯವರು ಏನು ಮಾಡುತ್ತಾರೆ, ಮಾಡಲಿ. ಎಲ್ಲರೂ ಸಮೀಕ್ಷೆಯಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.

Comments (0)

Your email address will not be published. Required fields are marked *

Back to top button