ಉಡುಪಿ: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯಗೆ ಸಿನಿಮಾ ಕೆಲಸದಲ್ಲಿ ಬ್ರೇಕ್ ಸಿಕ್ಕ ಬೆನ್ನಲ್ಲೇ ಸ್ನೇಹಿತರ ಜೊತೆ ಟ್ರಿಪ್‌ಗೆ ತೆರಳಿದ್ದಾರೆ. ಉಡುಪಿ ಜಿಲ್ಲೆಯ ನೇತ್ರಾಣಿ ದ್ವೀಪದ ಬಳಿ ಸಮುದ್ರದಲ್ಲಿ ನಟ ಡಾಲಿ ಧನಂಜಯ ಅವರು ಸೋಮವಾರ ಸ್ಕ್ಯೂಬಾ ಡೈವಿಂಗ್ ಮಾಡಿ ಖುಷಿಪಟ್ಟರು.

ಜೀಬ್ರಾ ಸಿನಿಮಾದ ರಿಲೀಸ್ ಹಾಗೂ ಸಕ್ಸಸ್ ನಂತರ ರಿಲ್ಯಾಕ್ಸ್ ಮೂಡ್‌ನಲ್ಲಿರುವ ಡಾಲಿ ಧನಂಜಯ್, ಸ್ನೇಹಿತರ ಜೊತೆ ಟ್ರಿಪ್ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಸ್ನೇಹಿತರ ಜೊತೆಗೆ ಸ್ಕ್ಯೂಬಾ ಡೈವಿಂಗ್ ಮಾಡಿ ಎಂಜಾಯ್ ಮಾಡಿದರು. ಸುಮಾರು 45 ನಿಮಿಷಗಳ ಕಾಲ ಸ್ಕ್ಯೂಬಾ ಡೈವ್ ಮಾಡಿದ ಡಾಲಿ ಧನಂಜಯಗೆ ಮೈಸೂರಿನ ಗೆಳೆಯರು ಸಾಥ್ ನೀಡಿದರು.

ಮುರುಡೇಶ್ವರದಿಂದ 10 ಕಿ.ಮೀ ದೂರವಿರುವ ನೇತ್ರಾಣಿ ದ್ವೀಪಕ್ಕೆ ಡಾಲಿ ಭೇಟಿ ನೀಡಿದ್ದಾರೆ. ಸುಮಾರು 45 ನಿಮಿಷಗಳ ಕಾಲ ನೇತ್ರಾಣಿಯಲ್ಲಿ ಡಾಲಿ ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಡಾಲಿ ಟ್ರಿಪ್‌ಗೆ ಮೈಸೂರಿನ ಸ್ನೇಹಿತರು ಕೂಡ ಸಾಥ್ ನೀಡಿದ್ದಾರೆ.

ಇನ್ನೂ ಡಾಕ್ಟರ್ ಧನ್ಯತಾ ಜೊತೆ ಡಾಲಿ ಫೆ.16ರಂದು ಮೈಸೂರಿನಲ್ಲಿ ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ಧನ್ಯತಾ ಜೊತೆಗಿನ ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ರೆಡಿಯಾಗಿದ್ದಾರೆ.


