Top Newsವೈರಲ್ ನ್ಯೂಸ್ಸುದ್ದಿ
ಗಂಟೆಯೊಳಗೆ 17 ಜನಕ್ಕೆ ಕಚ್ಚಿದ ನಾಯಿ: ವಿಡಿಯೋ ವೈರಲ್

ಗೋರಖ್ ಪುರ: ಉತ್ತರಪ್ರದೇಶದ ಗೋರಖ್ ಪುರದಲ್ಲಿ ಬೀದಿನಾಯಿಯೊಂದು ಸಿಕ್ಕ ಸಿಕ್ಕವರಿಗೆ ಕಚ್ಚಿ ಭೀತಿ ಮೂಡಿಸಿದೆ. ಒಂದು ಗಂಟೆಯೊಳಗೆ ಬರೋಬ್ಬರಿ 17 ಮಂದಿಗೆ ಕಚ್ಚಿ ಅಟ್ಟಹಾಸ ಮೆರೆದಿದೆ.
ಆಗಸ್ಟ್ 14 ರಂದು ಘಟನೆ ನಡೆದಿದ್ದು 22 ವರ್ಷದ ಆಶಿಶ್ ಯಾದವ್ ಎಂಬಾತ ನಾಯಿಯಿಂದ ಕಚ್ಚಿಸಿಕೊಂಡ 17ನೇ ವ್ಯಕ್ತಿಯಾಗಿದ್ದಾನೆ.
ಆಶಿಶ್ ತನ್ನ ಮನೆಯ ಹೊರಗೆ ಮೊಬೈಲ್ನಲ್ಲಿ ಮಾತನಾಡುತ್ತಾ ಆರಾಮವಾಗಿ ನಡೆದುಕೊಂಡು ಹೋಗುತ್ತಿದ್ದಾಗ ಬೀದಿ ನಾಯಿ ದಾಳಿ ಏಕಾಏಕಿ ಆಘಾತಕ್ಕೀಡು ಮಾಡಿದೆ. ಮುಖದ ಮೇಲೂ ಹಾರಿ ಕಚ್ಚಿದ ಘಟನೆಯು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಆಸ್ಪತ್ರೆ ಹೋದಾಗ ಜಿಲ್ಲಾ ಆಸ್ಪತ್ರೆಯಲ್ಲಿ ರೇಬಿಸ್ ಲಸಿಕೆ ಇಲ್ಲ ಎಂದಿದ್ದಾರೆ ಎಂದು ಯುವಕನ ತಂದೆ ವಿಜಯ್ ಯಾದವ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.




