ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಪಾಟೀಲ್ ರನ್ನ ಬಿಜೆಪಿ ಪಕ್ಷದಿಂದ ಮುಖ್ಯ ಸಚೇತಕರಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿ ರಾಜಕೀಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸೂಚನೆ ಮೇರೆಗೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ದೊಡ್ಡನಗೌಡ ಪಾಟೀಲರು ಆಯ್ಕೆ ಆಗಿರೋದಕ್ಕೆ ಕುಷ್ಟಗಿ ಕ್ಷೇತ್ರದ ಎಲ್ಲಾ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನು ರಾಜ್ಯ ಬಿಜೆಪಿ ಪಕ್ಷದ ನೂತನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಶರಣು ತಳ್ಳಿಕೇರಿಯವರನ್ನು ಬಿಜೆಪಿ ನಾಯಕ ಪ್ರಭಾಕರ ಚಿಣಿ ಅಭಿನಂದಿಸಿದರು. ಶರಣು ತಳ್ಳಿಕೇರಿ ಆಯ್ಕೆಗೂ ಬಿಜೆಪಿ ಮುಖಂಡರು ಮತ್ತು ಅವರ ಅಭಿಮಾನಿ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.