ಕುಂಭಮೇಳದಲ್ಲಿ ಖ್ಯಾತಿ ಪಡೆದ ಮೋನಾಲಿಸಾ ನಿಜವಾದ ವಯಸ್ಸೆಷ್ಟು ಗೊತ್ತಾ..?

ಇಂದೋರ್ನ ಮಾಲೆ ಮಾರಾಟಗಾರ್ತಿ ಮೊನಾಲಿಸಾ ಭೋಂಸ್ಲೆ ಅವರು ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುವ ವೀಡಿಯೊಗಳು ವೈರಲ್ ಆದ ನಂತರ ರಾತ್ರೋರಾತ್ರಿ ಸಂಚಲನವಾಯಿತು. ಜನವರಿ 21 ರಂದು, ಅವರು Instagram ನಲ್ಲಿ ಹಂಚಿಕೊಂಡ ಹೃದಯಸ್ಪರ್ಶಿ ವೀಡಿಯೊಗಳ ಸರಣಿಯೊಂದಿಗೆ ತಮ್ಮ 16 ನೇಯ ಜನ್ಮದಿನವನ್ನು ಆಚರಿಸಿಕೊಂಡರು, ಇದು ತ್ವರಿತವಾಗಿ ಅರ್ಧ ಮಿಲಿಯನ್ ವೀಕ್ಷಣೆಗಳನ್ನು ಗಳಿಸಿತು.
ರಾತ್ರೋರಾತ್ರಿ ಬಂದ ಖ್ಯಾತಿಯೇ ಆಕೆಗೆ ಸುರಕ್ಷತೆಯ ಭಯ ಹುಟ್ಟಿಸಿತ್ತು, ಇದಾದ ನಂತರ ಆಕೆಯ ಸಾಕಷ್ಟು ವೀಡಿಯೋಗಳು ವೈರಲ್ ಆಗಿದ್ದವು, ಕೆಲವು ವೀಡಿಯೋಗಳಲ್ಲಿ ಕೆಲವು ಇನ್ಫ್ಲುಯೆನ್ಸರ್ಗಳು ಆಕೆಯ ಹಿಂದೆ ಬಿದ್ದು ಫೋಟೋಗಾಗಿ ಹಿಂಬಾಲಿಸುತ್ತಿರುವ ವೀಡಿಯೋಗಳು ವೈರಲ್ ಆಗಿದ್ದರೆ, ಅತ್ತ ಆಕೆ ಅವರ ಮೊಬೈಲ್ ಫೋನ್ಗಳನ್ನು ಕಿತ್ತೆಸೆದ ವೀಡಿಯೋಗಳು ವೈರಲ್ ಆಗಿದ್ದವು.
ಈ ಮಧ್ಯೆ ಆಕೆ ಕೇಕ್ ಕತ್ತರಿಸಿ ಅದ್ದೂರಿ ಹುಟ್ಟುಹಬ್ಬ ಆಚರಿಸಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನವರಿ 21ರಂದು ಮೋನಾಲಿಸಾ ಭೋಂಸ್ಲೆ ತನ್ನ 16ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಆಕೆಯ ವೀಡಿಯೋವನ್ನು ಮಿಲಿಯನ್ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅನೇಕರು ಆಕೆಗೆ ಹುಟ್ಟುಹಬ್ಬದ ಶುಭ ಕೋರಿದ್ದು, ಒಳ್ಳೆಯದಾಗಲಿ ಎಂದು ಮನದುಂಬಿ ಹಾರೈಸಿದ್ದಾರೆ. ಅನೇಕರು ಆಕೆಗೆ ಕುಂಭ ಮೇಳಕ್ಕೆ ಬಂದು ಖ್ಯಾತಿ ಬಂತು ದೇವರು ಕೊಟ್ರೆ ಒಮ್ಮೆಗೆ ತುಂಬಾ ಕೊಡ್ತಾನೆ ಎಂದು ಈ ವೀಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ. ವೀಡಿಯೋದಲ್ಲಿ ಮೋನಾಲಿಸಾ ಕೇಕ್ ಕತ್ತರಿಸುತ್ತಿದ್ದರೆ ಆಕೆಯ ಜೊತೆಗಿರುವವರು ಆಕೆಗೆ ಹುಟ್ಟುಹಬ್ಬದ ಶುಭಾಶಯ ಹೇಳುತ್ತಿದ್ದಾರೆ.




