Freedom TV

ದರ್ಶನ್,ವಿಜಯಲಕ್ಷ್ಮಿ LOVE ಶುರುವಾಗಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

Darshan-Vijayalakshmi Love Story: ಚಾಲೆಂಜಿಂಗ್ ಸ್ಟಾರ್   ದರ್ಶನ್‌ ಈಗ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್‌ ಆಗಿ ಜೈಲಿನಲ್ಲಿದ್ದಾರೆ.  ಆದರೆ ಇದೀಗ ದರ್ಶನ್‌ ಹಾಗೂ ಅವರ ಧರ್ಮ ಪತ್ನಿ ವಿಜಯಲಕ್ಷ್ಮೀ ಅವರ  ಲವ್‌ ಸ್ಟೋರಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.

Darshan Unseen Photos With Wife Vijayalakshmi | Darshan Wife | D Boss | Challenging Star Darshan Son

 

ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೊಲೀಸರ ವಶದಲ್ಲಿದ್ದಾರೆ. ಈ ವಿಷಯದ  ಬಗ್ಗೆ ಅವರ ಪತ್ನಿ ವಿಜಯಲಕ್ಷ್ಮೀ ಬೇಸರದಿಂದ ಮೌನ ತಾಳಿದ್ದರೆ. ಅಲ್ಲದೇ ಪತಿಯನ್ನು ಇನ್‌ಸ್ಟಾಗ್ರಾಂನಿಂದ ಅನ್‌ಫಾಲೋ ಮಾಡಿ, ಇತ್ತೀಚೆಗೆ ತಮ್ಮ ಇನ್‌ಸ್ಟಗ್ರಾಂ ಅಕೌಂಟ್ ಅನ್ನು ಡಿಲೀಟ್‌ ಮಾಡಿದ್ದರು. ಇದೆಲ್ಲವೂ ಹಲವು ಶಂಕೆಗಳಿಗೆ ಎಡೆಮಾಡಿಕೊಟ್ಟಿತ್ತು.

ದರ್ಶನ್,ವಿಜಯಲಕ್ಷ್ಮಿ LOVE ಶುರುವಾಗಿದ್ದು ಹೇಗೆ?

Darshan's Wife Vijaya Lakshmi Reacts To Pavithra Gowda's Controversial Pics: 'It Talks About Her Character' - Oneindia NewsVijaylakshmiDarshanFC (@vijaylakshmidfc) / X

ಸದ್ಯ ದರ್ಶನ್‌ ಹಾಗೂ ವಿಜಯಲಕ್ಷ್ಮೀ ಲವ್‌ ಸ್ಟೋರಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹುಡುಕಾಟಗಳು ನಡೆದಿವೆ. ಹಾಗಾದ್ರೆ ಇಂಜಿನಿಯರಿಂಗ್ ಓದಿರುವ ವಿಜಯಲಕ್ಷ್ಮೀ  ಡಿಪ್ಲೋಮಾ ಒದಿರುವ ನಟ ದರ್ಶನ್‌ಗೆ ಸಿಕ್ಕಿದ್ದು ಎಲ್ಲಿ,ಹೇಗೆ? ಇವರ ಪ್ರೀತಿ ಶುರುವಾಗಿದ್ದು ಹೇಗೆ?

ನಟ ದರ್ಶನ್‌  ಅವರು ತಮ್ಮ ಸ್ನೇಹಿತೆಯ ರೀನಾ ಎಂಬುವವರ ಬರ್ತಡೇ ಪಾರ್ಟಿಗೆ ಹೋಗಿದ್ದಾಗ ಚಾಚೆಂಜಿಂಗ್‌ ಸ್ಟಾರ್‌, ಡಿ ಬಾಸ್,ದರ್ಶನ್  ವಿಜಯಲಕ್ಷ್ಮೀ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಅಲ್ಲಿ ರೀನಾ ಇಬ್ಬರಿಗೂ ಪರಿಚಯ ಮಾಡಿ ಕೊಟ್ಟಿದ್ದರು. ಅಲ್ಲಿಂದ ಇವರಿಬ್ಬರ ನಡುವೆ ಸ್ನೇಹ ಬೆಳೆದು ದಿನದಿಂದ ದಿನಕ್ಕೆ ಹತ್ತಿರವಾಗುತ್ತಾ ಹೋಗುತ್ತಾರೆ.

ನಂತರ ಲವ್‌ ಮ್ಯಾರೇಜ್‌ಗೆ ತಾಯಿಯ ಒಪ್ಪಿಗೆ ಪಡೆದಿದ್ದ ದರ್ಶನ್‌ ಒಂದು ದಿನ ವಿಜಯಲಕ್ಷ್ಮೀ ಅವರಿಗೆ ಲವ್‌ ಪ್ರಪೋಸ್‌ ಮಾಡುತ್ತಾರೆ. ಕೂಡಲೇ ವಿಜಯಲಕ್ಷ್ಮೀ ಒಪ್ಪಿಕೊಳ್ಳುತ್ತಾರೆ. ನಂತರ ಹೆಚ್ಚು ಸಮಯ ತೆಗೆದುಕೊಳ್ಳದೇ ದರ್ಶನ್‌ ತಮ್ಮ ತಾಯಿಗೆ ಅವರನ್ನು ಪರಿಚಯಿಸಿ ಕೆಲವು ದಿನಗಳ ಬಳಿಕ ಧರ್ಮಸ್ಥಳದಲ್ಲಿ ವಿವಾಹವಾಗುತ್ತಾರೆ.   ನಟ ದರ್ಶನ್  ಅವರನ್ನು ಮದುವೆಯಾದ ಬಳಿಕವೇ ಮೆಜೆಸ್ಟಿಕ್‌ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಾರೆ. ಅಲ್ಲಿಂದ ಹಿಂದಿರುಗಿ ನೋಡೆ ಇಲ್ಲ. ಸದ್ಯ ದಂಪತಿಗೆ  ವೀನೀಶ್ ಅನ್ನುವ  ಒಬ್ಬ ಮಗನಿದ್ದಾನೆ.

Three Main Reasons For The Split Between Darshan & Wife Vijayalakshmi - Filmibeat  kannada movies actor challenging star darshan marriage rare moments dross marriage photos - YouTube

ಇನ್ನು ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಆಗ್ಗಾಗೆ ದರ್ಶನ್‌ ಅವರನ್ನು ನೋಡಲು ಜೈಲಿಗೆ ಹೋಗುತ್ತಿರುತ್ತಾರೆ. ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ಅವರ ಈ ವಿಡಿಯೋಗಳೇ ಸಖತ್‌ ಸದ್ದು ಮಾಡುತ್ತಿವೆ.ಸದ್ಯ ನಟ ದರ್ಶನ್‌ ವಿಚಾರವಾಗಿ ವಿಜಯಲಕ್ಷ್ಮೀ ಹೋರಾಡುತ್ತಿದ್ದಾರೆ. ಅಲ್ಲದೇ ಅವರ ಅಭಿಮಾನಿಗಳು ಕೂಡ ಬಾಸ್‌ ಬೇಗ ಹೊರಬರಲಿ ಎನ್ನುವ ಆಶಯದಲ್ಲಿದ್ದಾರೆ. ಆದ್ರೆ ರೇಣುಕಾಸ್ವಾಮಿ ಕೇಸ್‌ ದಿನದಿಂದ ದಿನಕ್ಕೆ ಒಂದೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಿದ್ದು, ಯಾವಾಗ ದರ್ಶನ್‌ ಹೊರಬರುತ್ತಾರೋ ಕಾದುನೋಡಬೇಕಿದೆ.. ?

Comments (0)

Your email address will not be published. Required fields are marked *

Back to top button