Top Newsರಾಜಕೀಯರಾಜ್ಯವಾಣಿಜ್ಯಸುದ್ದಿ

ಬೆಂಗಳೂರು ಅಭಿವೃದ್ದಿಗೆ ಡಿಕೆಶಿ ಭರವಸೆ; ಪೈ ಹೇಳಿಕೆ

ಬೆಂಗಳೂರು ಅಭಿವೃದ್ದಿ ಮತ್ತು ನಗರದ ಮೂಲಭೂತ ಸೌಕರ್ಯಗಳ ಬಗ್ಗೆ ಮೊನ್ನೆಯಷ್ಟೇ ಟ್ಷೀಟ್ ಮೂಲಕ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದ ಉದ್ಯಮಿ ಟಿ.ವಿ.ಮೋಹನದಾಸ್ ಪೈ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲು ಅವರನ್ನು ಭೇಟಿಯಾಗಿದ್ದೆವು, ತಮ್ಮ ಭೇಟಿಯ ಉದ್ದೇಶವಿಷ್ಟೇ; ನಗರದ ಸರ್ವಾಂಗೀಣ ಅಭಿವೃದ್ಧಿಯಾಗಬೇಕು, ಅವರು ಬೆಂಗಳೂರಿನ ಹೀರೋ ಆಗಬೇಕು, ಬೆಂಗಳೂರು ಭಾರತ ದೇಶದಲ್ಲೇ ಅತ್ಯಂತ ಸುಂದರವಾದ ದೇಶ, ಇದು ಸ್ಟಾರ್ಟರ್ಪ್ ಗಳ ಬೀಡು, 15,000 ಡಾಲರ್ಸ್ ಪರ್ ಕ್ಯಾಪಿಟಾ ಆದಾಯ ಹೊಂದಿರುವ ಬೆಂಗಳೂರು ದೇಶದ ಶ್ರೀಮಂತ ನಗರಗಳಲ್ಲಿ ಒಂದು ಅಂತ ಹೇಳಿದರು.

ಒಟ್ನಲ್ಲಿ, ಬೆಂಗಳೂರು ಅಭಿವೃದ್ಧಿ ಆಗಬೇಕು. ಬೆಂಗಳೂರು ಉತ್ತಮ ನಗರ, ಗ್ಲೋಬಲ್ ಸಿಟಿ, ಸೈನ್ಸ್ ಬೇಕು. ನಮಗೆ ಒಳ್ಳೆಯ ಅಭಿವೃದ್ಧಿ ಬೇಕು. ಪುಟ್‌ಪಾತ್, ರಸ್ತೆ, ಮೆಟ್ರೋ ಅಭಿವೃದ್ಧಿ ಆಗಬೇಕು. ಇನ್ನೂ ಆರು ತಿಂಗಳಲ್ಲಿ ಅಭಿವೃದ್ಧಿ ಮಾಡುತ್ತೇನೆ ಅಂದಿದ್ದಾರೆ. ಸಮಸ್ಯೆ ಬಗೆ ಹರಿಸುವ ಭರವಸೆ ಇದೆ ಎಂದು ಹೇಳಿದರು.

Comments (0)

Your email address will not be published. Required fields are marked *

Back to top button