ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ತಮಿಳುನಾಡಿನ ಕುಂಭಕೋಣಂ ಜಿಲ್ಲೆಯ ಅಯ್ಯಾವುಡಿಯಲ್ಲಿರುವ ಪ್ರಾಚೀನ ಪ್ರತ್ಯಂಗಿರಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಉಗ್ರ ಸ್ವರೂಪಿಣಿ ಪ್ರತ್ಯಂಗಿರಾ ದೇವಿಯ ದರ್ಶನ ಪಡೆದರು. ಈ ದೇವಾಲಯ ಅತ್ಯಂತ ಪ್ರಾಚೀನವಾದ್ದಾಗಿದ್ದು, ಬಹಳ ಪ್ರಸಿದ್ಧಿ ಪಡೆದಿದೆ.

ಪ್ರತ್ಯಂಗಿರಾ ದೇವಿ ವಿಶೇಷತೆ..!

ಈ ಬ್ರಹ್ಮಾಂಡವನ್ನು ಕಾಲಕಾಲಕ್ಕೆ ರಕ್ಷಿಸಲು ದೇವತೆಗಳು ಮತ್ತು ದೇವರು ವಿವಿಧ ಅವತಾರಗಳನ್ನು ತಾಳಿದ್ದಾರೆ. ಅಂತಹ ಅವತಾರದಲ್ಲಿ ʻಪ್ರತ್ಯಂಗಿರಾ ದೇವಿʼಯ ಅವತಾರವೂ ಒಂದು. ಪ್ರತ್ಯಂಗಿರಾ ದೇವಿಯು ಶಕ್ತಿ ದೇವತೆಗಳಲ್ಲಿ ಉಗ್ರ ಸ್ವರೂಪಿಣಿ, ಶತ್ರು ಸಂಹಾರಕ್ಕಾಗಿ ಜನಿಸಿ ಬಂದವಳು ಈಕೆ. ಶಿವ-ವಿಷ್ಣು ಹಾಗೂ ಆದಿಶಕ್ತಿ ಈ ಮೂವರ ಅಂಶವನ್ನು ಹೊಂದಿರುವ ದೇವತೆ ಎಂಬ ನಂಬಿಕೆಯಿದೆ. ಈ ಪ್ರತ್ಯಂಗಿರಾ ದೇವಿಯು ಸಿಂಹದ ಮುಖ ಸ್ತ್ರೀಯ ದೇಹ ಹೊಂದಿದ್ದು ಸಿಂಹವನ್ನೇ ವಾಹನವಾಗಿ ಮಾಡಿಕೊಂಡಿದ್ದಾಳೆ. ಇಂದಿಗೂ ಈ ದೇವಿಯ ಮೇಲೆ ಜನರ ನಂಬಿಕೆ ಕಿಂಚಿತ್ತೂ ಕಡಿಮೆಯಾಗಿಲ್ಲ.

Leave a Reply

Your email address will not be published. Required fields are marked *

Verified by MonsterInsights