ಬೆಂಗಳೂರಲ್ಲಿ ನೀರಿನ ದರ ಏರಿಸುವ ನಿರ್ಧಾರ-ಡಿಕೆಶಿ ಹೇಳಿಕೆಗೆ ಜನ ಹಲ್ ಚಲ್

ಬೆಂಗಳೂರು: ಜಲಮಂಡಳಿ ನೀರಿನ ದರ ಏರಿಕೆ ಮಾಡಲು ಮುಂದಾಗಿದೆ. ಇಂದರಿಂದ ಬೆಂಗಳೂರು ಮಂದಿ ಗರಂ ಆಗಿದ್ಧಾರೆ. ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ಒಂದೇ ಒಂದು ಹೇಳಿಕೆ ಎಲ್ಲಾ ಕಡೆ ಹಲ್ ಚಲ್ ಎಬ್ಬಿಸಿದೆ.
ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ಒಂದೇ ಒಂದು ಹೇಳಿಕ ಇದೀಗ ಬೆಂಗಳೂರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಪೂರಕವಾಗಿ ಕೆಲಸ ಆರಂಭಿಸಿರುವ ಜಲಮಂಡಳಿ ಶೀಘ್ರವೇ ನೀರಿನ ದರ ಪರಿಷ್ಕರಣೆಗೊಳಿಸಲಿದೆ. ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಬಿರುಸಿನ ಚರ್ಚೆ ನಡೆದಿದ್ದು, ಹತ್ತು ವರ್ಷಗಳ ಬಳಿಕ ನೀರಿನ ದರ ಈ ಮೂಲಕ ಹೆಚ್ಚಳವಾಗಲಿದೆ. ಹಾಗಾದ್ರೆ ನೀರಿನ ದರ ಏರಿಕೆ ಮಾಡಲು ಜಲಮಂಡಳಿ ನೀಡ್ತಿರುವ ಕಾರಣವೇನು? ಈ ಬಗ್ಗೆ ಜಲಮಂಡಳಿ ಅಧ್ಯಕ್ಷ ಎಕ್ಸ್ಕ್ಲೂಸಿವ್ ಆಗಿ ಮಾಹಿತಿ ಕೊಟ್ಟಿದ್ದಾರೆ.
2014 ರಿಂದ ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಪರಿಷ್ಕರಣೆ ಆಗಿಲ್ಲ. ಹೀಗಾಗಿ ದುಬಾರಿ ನೀರಿನ ಬಿಲ್ ಏರಿಕೆಮಾಡೋಕೆ BWSSB ಮುಂದಾಗಿದ್ದು, ನಾಲ್ಕೈದು ಬಾರಿ ನೀರಿನ ದರ ಪರಿಷ್ಕರಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿ ಸರ್ಕಾರ ತಿರಸ್ಕರಿಸಲಾಯಿತು. ಆದ್ರೆ ಇದೀಗ ಸರ್ಕಾರ ಅನುಮತಿ ಸಿಕ್ಕ ಬೆನ್ನಲ್ಲೇ ಕಾವೇರಿ ನೀರಿನ ದರ ಹೆಚ್ಚಳಕ್ಕೆ ಮುಂದಾಗಿದೆ. ಈಗಾಗಲೇ ವಿದ್ಯುತ್ ದರ ಏರಿಕೆಯಿಂದ ಕಂಪ್ಲೀಟ್ ತತ್ತರಿಸಿರುವ ಜಲಮಂಡಳಿ, ನೌಕರರಿಗೆ ಸಂಬಳ ನೀಡೋಕ್ಕೂ ಒದ್ದಾಡುವ ಪರಿಸ್ಥಿತಿ ಉಂಟಾಗಿದೆ.
ಜಲಮಂಡಳಿ ಮೇಲೆ ಆರ್ಥಿಕ ಹೊರೆ ಇದ್ದರೆ ಅದನ್ನು ಬೇರೆ ರೀತಿಯಲ್ಲಿ ನಿಭಾಯಿಸಿಕೊಳ್ಳಬೇಕು. ಅದನ್ನು ಬಿಟ್ಟು ಸಾರ್ವಜನಕರ ಮೇಲೆ ಆ ಹೊರೆ ಹೊರೆಸುವುದು ಸರಿಯಲ್ಲ ಅಂತಿದ್ದಾರೆ ಸಾರ್ವಜನಿಕರು. ಸದ್ಯ ಜಲಮಂಡಳಿಗೆ 120 ಕೋಟಿ ಆದಾಯ ಪ್ರತಿ ತಿಂಗಳು ಸಂಗ್ರಹ ಆಗ್ತಿದೆ. ಆದರೆ ಪ್ರತಿ ತಿಂಗಳು ನಾವು 160-70 ಕೋಟಿ ವೆಚ್ಚ ಮಾಡಲಾಗ್ತಿದೆ. ಪ್ರತಿ ತಿಂಗಳು ಜಲಮಂಡಳಿಗೆ ಅಂದಾಜು 50 ಕೋಟಿ ಹೊರೆಯಾಗ್ತಿದೆ. ಇದನ್ನು ತಪ್ಪಿಸುವ ಕಾರಣದಿಂದ ಬೆಲೆ ಏರಿಕೆಗೆ ಮುಂದಾಗಿದೆ ಜಲಮಂಡಳಿ.



