ಚಿಕ್ಕಬಳ್ಳಾಪುರ : ಇನ್ನೂ 6 ತಿಂಗಳಲ್ಲಿಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಚಿಕ್ಕ ಬಳ್ಳಾಪೂರ ಜಿಲ್ಲೆ ಹಾಲಿ ಸಂಸದ ಡಾ.ಕೆ ಸುಧಾಕರ್ ಭವಿಷ್ಯ ನುಡಿದಿದ್ದಾರೆ.ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ.
ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ಅನ್ನುವವರು ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇಲ್ಲವಾ…? 35 ಮಂದಿ ನ್ಯೂ ಇಯರ್ ಪಾರ್ಟಿ ಡಿನ್ನರ್ ಮೀಟಿಂಗ್ ಮಾಡಿದ್ದಾರೆ. ಅದ್ರಲ್ಲೂ ಉಪ ಮುಖ್ಯಮಂತ್ರಿಳು ಹೊಸ ವರ್ಷದ ಸಂಭ್ರಮದಲ್ಲಿ ಫಾರಿನ್ ಟೂರಲ್ಲಿ ಇರಬೇಕಾದ್ರೆ ಮಾಡಿದ್ರಲ್ಲ, ಇದು ಗುಂಪುಗಾರಿಕೆ ಅಲ್ಲವಾ..? ಎಂದು ಪ್ರಶ್ನಿಸಿದ್ದಾರೆ.ಇನ್ನೂ ಡಿಸಿಎಂ ಡಿಕೆ ಶಿವಕುಮಾರ್ 6 ತಿಂಗಳಲ್ಲಿ ಸಿಎಂ ಆಗುವ ಪರಿಸ್ಥಿತಿ ಇದೆ. ಹಾಗಾಗಿ ಸಿಎಂ ಡಿನ್ನರ್ ಮೀಟಿಂಗ್ ಮಾಡಿದ್ದಾರೆ ಎಂದು ಕುಟುಕಿದ್ದಾರೆ.


