Top Newsಜಿಲ್ಲೆ

ಖಾಲಿ ಟ್ರಂಕು, ಖಾಲಿ ಮಾತು: ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್​ ಗುದ್ದು

ರಾಮನಗರ : ಯಾರು, ಎಷ್ಟೇ ಕುತಂತ್ರ ಮಾಡಿದರೂ ಬೆಂಗಳೂರು ದಕ್ಷಿಣ ಹೆಸರನ್ನು ಅಳಿಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಕೇಂದ್ರ ಮಂತ್ರಿ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಗುಡುಗಿದ್ದಾರೆ.

25-30 ವರ್ಷಗಳಿಂದ ಅವರಿಗೆ ಬೆಂಗಳೂರಿನಿಂದ ದೆಹಲಿಯವರೆಗೆ ಹಲವು ಅವಕಾಶ ನೀಡಿದ್ದೀರಿ. ಆದರೂ ಅವರ ಕತೆ ಬರೇ ಬುಟ್ಟಿ ಬೇವಿನ ಸೊಪ್ಪು.. ನಂದೆ ಬೆಳಗು ಪೂಜಾರಿ ಅನ್ನುವಂತಾಯಿತು. ಬರೀ ಖಾಲಿ ಟ್ರಂಕು, ಖಾಲಿ ಮಾತು ಎಂದು  ಪರೋಕ್ಷವಾಗಿ ಹೆಚ್​.ಡಿ.ಕುಮಾರಸ್ವಾಮಿ ಹೆಸರು ಹೇಳದೆ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ

ರಾಮನಗರದ ಜೂನಿಯರ್​​ ಕಾಲೇಜು ಮೈದಾನದಲ್ಲಿ ನಡೆದ ಡಾ. ಬಿ.ಆರ್​​​. ಅಂಬೇಡ್ಕರ್​​ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ರಾಮನಗರ ಪಟ್ಟಣ ಪ್ರದೇಶದ ಅಭಿವೃದ್ಧಿಗೆ 150 ಕೋಟಿ ರೂಪಾಯಿ, ನೀರಾವರಿ ಇಲಾಖೆಯಿಂದ 400 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಜಿಲ್ಲಾ ಕೇಂದ್ರಕ್ಕೆ ಹೊಸರೂಪ ನೀಡ್ತೇವೆ ಎಂದು ಡಿ.ಕೆ. ಶಿವಕುಮಾರ್​​  ಘೋಷಣೆ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button