#Exclusive NewsTop Newsಜಿಲ್ಲೆಸುದ್ದಿ

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೊಳೆತ ತರಕಾರಿಗಳಿಂದಲೇ ಆಹಾರ ವಿತರಣೆ!

ಚಳ್ಳಕೆರೆ : ಹುಳ ಬಿದ್ದ ಎಲೆಕೋಸು ,ಕೊಳೆತ ಕ್ಯಾರೇಟ್, ಕಪ್ಪಾದ ಈರುಳ್ಳಿ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಕೊಳೆತ ತರಕಾರಿಗಳಿಂದ ಮಾಡಿದ ಊಟ,ತಿಂಡಿ.
ಇಂತಹ ದೃಶ್ಯ ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ರಸ್ತೆಯಲ್ಲಿರುವ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ.

 

ಸರ್ಕಾರ ಹಿಂದುಳಿದ ವರ್ಗದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆಂದು ಅನುಕೂಲವಾಗಲಿ ಎನ್ನುವ ಉದ್ದೇಶದಿಂದ  ಸರ್ಕಾರ ಹಾಸ್ಟೆಲ್ ತೆರೆದಿದ್ದು, ಉತ್ತಮವಾದ ಕೊಠಡಿಗಳನ್ನು ನಿರ್ಮಿಸಿದೆ. ಈ ಹಾಸ್ಟೆಲ್​ನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಕೊಳೆತ ತರಕಾರಿಯ ಆಹಾರ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಶುದ್ಧವಾದ ಕುಡಿಯುವ ನೀರು ಸಿಗುತ್ತಿಲ್ಲ.ಮುಖ್ಯವಾಗಿ ಎರಡು ಹಾಸ್ಟೆಲ್​ಗಳಲ್ಲಿಯೂ ಸಿಸಿ ಕ್ಯಾಮೆರಾಗಳಿಲ್ಲ ಇದ್ದರೂ ಸಹ ಕಾರ್ಯ ನಿರ್ವಹಿಸುತ್ತಿಲ್ಲ.
ಹಾಸ್ಟೆಲ್ ವಾರ್ಡನ್ ಯಾರ ಮಾತಿಗೂ ಕಿಮ್ಮತ್ತು ನೀಡದೆ ತಮ್ಮ ಸಂಬಂಧಿಕರು ಒಬ್ಬರು ಅಧಿಕಾರಿಯಾಗಿದ್ದಾರೆ ಎಂದು ದರ್ಪ ತೋರುತ್ತಿದ್ದಾರೆ.ಇದರಿಂದ ರೋಸಿಹೋದ ವಿದ್ಯಾರ್ಥಿಗಳು ಇಂದು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

 

Comments (0)

Your email address will not be published. Required fields are marked *

Back to top button