87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇ ಳನದ ಅಂಗವಾಗಿ ದಸರಾ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವುದಕ್ಕೆ ಸಿದ್ಧತೆಗಳು ಆರಂಭ ಗೊಂಡಿವೆ.ನಗರ ವ್ಯಾಪ್ತಿಯನ್ನು ಒಳಗೊಂಡಂತೆ ಸಮ್ಮೇಳನ ನಡೆಯುವವರೆಗೆ ಸುಮಾರು 15 ರಿಂದ 20 ಕಿ.ಮೀ. ದೂರದವರೆಗೆ ಬೆಳಕಿನ ಅಲಂಕಾರ ಮಾಡುವುದಕ್ಕೆ ನಗರ ಅಲಂಕಾರ ಸಮಿತಿ ತೀರ್ಮಾನಿಸಿದೆ. ಸೆಸ್ಕಾಂ ವತಿಯಿಂದಲೇ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಿಸಲು ನಿರ್ಧರಿಸಿದ್ದು, 5 ದಿನಗಳ ಕಾಲ ನಗರ ಕಂಗೊಳಿಸಲಿದೆ.
ನಗರದ ಪ್ರಮುಖ ರಸ್ತೆಗಳಾದ ವಿ.ವಿ.ರಸ್ತೆ, ಆರ್.ಪಿ.ರಸ್ತೆ, ನೂರಡಿ ರಸ್ತೆ, ಬನ್ನೂರು ರಸ್ತೆ,ಜಿಲ್ಲಾಧಿಕಾರಿ ಕಚೇರಿ ರಸ್ತೆ, ಮೈಷುಗರ್‌ವೃತ್ತ, ಎಸ್.ಡಿ.ಜಯರಾಂ ವೃತ್ತ, ಮಹಾವೀರ ವೃತ್ತ, ಜಯಚಾಮರಾಜೇಂದ್ರ ಒಡೆಯರರ್‌ವೃತ್ತ, ಕಲ್ಲಹಳ್ಳಿ, ಕಿರಂಗೂರು ವೃತ್ತವನ್ನು ವರ್ಣರಂಜಿತವಾಗಿ ಬೆಳಗಿಸಲು ಅಲಂಕಾರ ಸಮಿತಿ ತೀರ್ಮಾನಿಸಿದೆ.

87ನೇಕನ್ನಡಸಾಹಿತ್ಯ ಸಮ್ಮೇಳನ ಶೀರ್ಷಿಕೆಯನ್ನು ವಿದ್ಯುತ್ ನಿರ್ಧರಿಸಲಾಗಿದೆ. ಸಮ್ಮೇಳನ ನಡೆಯುವ ಸ್ಥಳದಿಂದ ಹಿಡಿದು ಕಿರಂಗೂರು ವೃತ್ತದವರೆಗೆ ಹೆದ್ದಾರಿಯುದ್ದಕ್ಕೂ ಬೆಳಕಿನ ರಂಗು ತುಂಬಿರುವಂತೆ ಮಾಡುವುದಕ್ಕೆ ಚಿಂತನೆ ನಡೆಸಿದ್ದು, ಅಂತಿಮ ಹಂತದ ಸಿದ್ಧತೆಗಳನ್ನು ಸೆಸ್ಕಾಂ ಇಲಾಖೆಯವರು ಮಾಡಿಕೊಳ್ಳುತ್ತಿದ್ದಾರೆ. ನಗರ ವ್ಯಾಪ್ತಿಯೊಳಗೂ ವಿದ್ಯುತ್ ರಂಗನ್ನು ತುಂಬಿಸುವುದರೊಂದಿಗೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಮೆರುಗನ್ನು ತುಂಬುವುದರೊಂದಿಗೆ ಅದ್ದೂರಿತನವನ್ನು ತುಂಬುವುದು ವಿಶೇಷವಾಗಿದೆ. ಮೈಸೂರು ದಸರಾ ಮಾದರಿ ಯಲ್ಲೇ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದೀಪಾಲಂಕಾರದವೇಳೆಯನ್ನು ನಿಗದಿಪಡಿಸುವುದಕ್ಕೆ ಆಲೋಚಿಸುತ್ತಿದ್ದು, ಸೆಸ್ಕಾಂ ಇಲಾಖೆ ಅಧಿಕಾರಿಗಳು ಮಂಗಳವಾರ ಅಂತಿಮವಾಗಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

Verified by MonsterInsights