ಇದು ಡಿಂಗ ಡಿಂಗ ಡ್ಯಾನ್ಸ್ ರೋಗ!
ಹೌದು, ಈ ಕಾಯಿಲೆ ಹೆಸರೂ ವಿಚಿತ್ರವಾಗಿದೆ. ಇದು ಡಿಂಗ ಡಿಂಗ ಕಾಯಿಲೆ. ಡಿಂಗ ಡಿಂಗ ಅಂದ್ರೆ ಶೇಕ್ ಶೇಕ್ ಡ್ಯಾನ್ಸ್ ಅನ್ನೋ ಅರ್ಥ. ಉಗಾಂಡದಲ್ಲಿ ಕಾಣಿಸಿಕೊಂಡಿರೋ ಈ ಕಾಯಿಲೆಯಿಂದಾಗಿ ಈಗಾಗಲೇ ಮಹಿಳೆಯರು ಹಾಗೂ ಮಕ್ಕಳು ಸಾವಿನ ಬಾಗಿಲು ತಟ್ಟುತ್ತಿದ್ದಾರೆ. ಅದರಲ್ಲೂ ಬುಂಡಿಬುಗ್ಯೋ ಜಿಲ್ಲೆಯನ್ನ ಅಕ್ಷರಶಃ ಡಿಂಗ ಡಿಂಗ ಡ್ಯಾನ್ಸ್ ಡಿಸೀಸ್ ಬೆಚ್ಚಿ ಬೀಳಿಸುತ್ತಿದೆ.
300ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು
ಮೊದಲಿಗೆ ಇಡೀ ದೇಹ ಶೇಕ್ ಆಗೋ ಲಕ್ಷಣ ಕಾಣಿಸಿಕೊಳ್ಳುತ್ತದೆ. ಅದನ್ನ ಸುಮ್ಮನೇ ಬಿಟ್ಟು ಬಿಟ್ಟರೆ, ನಡೆದಾಡೋದಕ್ಕೂ ಆಗದೇ ಪಾರ್ಶ್ವವಾಯು ಬಡಿಯುತ್ತದೆ. ವಿಪರೀತ ಜ್ವರ, ಅತಿಯಾದ ಸುಸ್ತು ಕಾಣಿಸಿಕೊಂಡು ಮನುಷ್ಯ ಸತ್ತೇ ಹೋಗುವ ಸಾಧ್ಯತೆ ಇದೆ ಅಂತ ಉಗಾಂಡ ವೈದ್ಯಾಧಿಕಾರಿಗಳು ಡಿಂಗ ಡಿಂಗ ಡ್ಯಾನ್ಸ್ ಲಕ್ಷಣಗಳನ್ನು ಗುರ್ತಿಸಿದ್ದಾರೆ. ಇದುವರೆಗೂ ಉಗಾಂಡದ ಒಂದೇ ಜಿಲ್ಲೆಯಲ್ಲಿ 300ಕ್ಕೂ ಅಧಿಕ ಕೇಸ್ಗಳು ಪತ್ತೆ ಆಗಿವೆ.
ಕಾರಣ ಗೊತ್ತಿಲ್ಲ, ಔಷಧಿಯೂ ಇಲ್ಲ
ಇಂಥದ್ದೊಂದು ವಿಲಕ್ಷಣ ಕಾಯಿಲೆಗೆ ಕಾರಣ ಏನು ಅನ್ನೋದೇ ವಿಜ್ಞಾನಿಗಳನ್ನು ತಲೆ ಕೆಡಸಿಕೊಳ್ಳುವಂತೆ ಮಾಡಿದೆ. 2023ರಲ್ಲೇ ಮೊದಲ ಸಲ ಇಂಥದ್ದೊಂದು ಕಾಯಿಲೆ ಕಾಣಿಸಿಕೊಂಡಿತ್ತು. ಆವಾಗಿನಿಂದ್ಲೂ ಉಗಾಂಡ ವಿಜ್ಞಾನಿಗಳು ಈ ಕಾಯಿಲೆ ಯಾಕೆ ಬರುತ್ತೆ ಅನ್ನೋ ಮೂಲವನ್ನು ಪತ್ತೆ ಹಚ್ಚುತ್ತಲೇ ಇದ್ದಾರೆ. ಇದುವರೆಗೂ ಈ ಕಾಯಿಲೆಗೆ ಕಾರಣ ತಿಳಿದು ಬಂದಿಲ್ಲ. ಇನ್ನು, ಇದಕ್ಕೆ ಔಷಧಿ ಇಲ್ಲ. ಜ್ವರ, ಸುಸ್ತಿಗೆ ನೀಡುವ ಔಷಧಿ ಜೊತೆ ಪಾರ್ಶ್ವವಾಯುಗೆ ನೀಡುವ ಔಷಧವನ್ನೇ ನೀಡುತ್ತಿದ್ದಾರೆ.