ಬೆಂಗಳೂರು; ಕೊನೆಗೂ ಪಂಚಮಸಾಲಿ ಹೋರಾಟವನ್ನ ಮಾಡಿ ತನ್ನ ಧಂ ತಾಕತ್ ಏನು ? ಅನ್ನೋದನ್ನ ತೊಡೆತಟ್ಟಿ ಯತ್ನಾಳ್ ತೋರಿಸಿಕೊಟ್ಟಿದ್ದಾರೆ. ಒಂದೇ ಏಟಿಗೆ ಎರಡು ಹಕ್ಕಿಯನ್ನ ಹೊಡೆಯೋ ಕೆಲಸ ಮಾಡಿದ್ದಾರೆ.ಕೇಂದ್ರದ ವರಿಷ್ಠರ ಮಟ್ಟದಲ್ಲಿ ತಾನೊಬ್ಬ ಲೀಡರ್ ಅನ್ನೋದನ್ನ ತೋರಿಸಿಕೊಟ್ಟು ಅತ್ತ ರಾಜ್ಯ ಸರ್ಕಾರದ ಕಾಂಗ್ರೆಸಿಗೂ ತನ್ನದೇ ಪಕ್ಷ ಬಿಜೆಪಿಗೂ ಸೈ ಎನ್ನುವಂತೆ ಮಾಡಿದ್ದಾರೆ. ಅಂದ್ಹಾಗೆ ಯತ್ನಾಳ್ ಒಂದೇ ಏಟಿಗೆ ಎರಡು ಹಕ್ಕಿ ಹೊಡಿದ್ದಾರೆ.
ತನ್ನ ಬೆನ್ನ ಹಿಂದೆ ಪಂಚಮಸಾಲಿ ಸಮುದಾಯವಿದೆ ಅನ್ನೋದನ್ನ ದೆಹಲಿಮಟ್ಟಕ್ಕೂ ಸಾಬೀತುಪಡಿಸಿರೋ ಯತ್ನಾಳ್ ಅತ್ತ ಬಿಜೆಪಿಯ ಹೈಕಮಾಂಡ್ ಮುಂದೆ ತನ್ನ ಮೇಲುಗೈ ಸಾಧಿಸಿತೋರಿಸಿದ್ದಾರೆ. ಅಷ್ಟೇ ಅಲ್ಲ ಸರ್ಕಾರ ಪಂಚಮಸಾಲಿ ಪರ ಇಲ್ಲ ಎಂಬುದನ್ನೂ ಒತ್ತಿ ತೋರಿಸಿದ್ದಾರೆ.
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬಿಜೆಪಿಗೆ ಮೂಲ ವೋಟ್ ಬ್ಯಾಂಕ್ ಅಂದ್ರೆ ಲಿಂಗಾಯತ ಸಮುದಾಯ. ಈ ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿಯವ್ರದ್ದು ಪಾಲಿದೆ. ಹಿಂದೆ ಬೊಮ್ಮಾಯಿ ಸರ್ಕಾರದಲ್ಲಿ ಪಂಚಮಸಾಲಿ ಹೋರಾಟ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದಾಗ ಸ್ವಾಮೀಜಿಯನ್ನ ಅವ್ರನ್ನ ಬೊಮ್ಮಾಯಿ ಹತ್ರ ಕರ್ಕಂಡ್ಹೋಗಿದ್ದ ಯತ್ನಾಳ್ ಸಮಾಧಾನ ಮಾಡಿದ್ದರು.ಆದ್ರೆ ಈ ರಿಸ್ಕನ್ನ ವಿಜಯಾನಂದ ಕಾಶ್ಯಪ್ಪನವರ್ ತಗೊಳ್ಲೇಯಿಲ್ಲ, ಅಷ್ಟೇ ಪ್ರತಿಭಟನೆ ಮಾಡಿಕೊಳ್ಳೋದಿದ್ರೆ ಮಾಡಿಕೊಳ್ಳಲೀ ಅಂತಾ ಸ್ವತಃ ಸಿದ್ದರಾಮಯ್ಯರೇ ಹೇಳಿ ಪ್ರಜಾಪ್ರಭುತ್ವದಲ್ಲಿ ಎಲ್ರಿಗೂ ಪ್ರತಿಭಟಿಸೋ ಹಕ್ಕಿದೆ ಅಂತ ಅಡ್ಡಗೋಡೆಯ ಮೇಲೆ ದೀಪವಿಟ್ಟು ಬಿಟ್ಟರು. ಅದ್ರರ್ಥ ಯತ್ನಾಳ್ ಬಿ.ವೈ.ವಿಜಯೇಂದ್ರ ವಿರುದ್ಧದ ಹೋರಾಟ ಸಮುದಾಯಕ್ಕಾಗಿ ನಡೆಯಲೀ ಎಂಬುದು ಸಹ ಪರೋಕ್ಷವಾಗಿ ಇದಾಗಿತ್ತು.
ಪಂಚಮಸಾಲಿ ಹೋರಾಟ ಮುನ್ನೆಲೆಗೆ ಬಂದಿದ್ದಾಗ ಕಾಂಗ್ರೆಸಿನ ವಿಜಯಾನಂದ ಕಾಶಪ್ಪನವರ್ ರಾಷ್ಟ್ರಾಧ್ಯಕ್ಷರಾದ್ರೆ ಹೊರತು ಸಮುದಾಯವನ್ನ ಸಮಾಧಾನಪಡಿಸುವಲ್ಲಿ ಮುಂದಾಗಲೇ ಇಲ್ಲ, ಹೋರಾಟ ಮಾಡೋ ಬದ್ಲು ನೇತೃತ್ವದಿಂದ್ಲೇ ಹಿಂದೆ ಸರಿದುಬಿಟ್ಟರು. ಇದು ಕಾಂಗ್ರೆಸ್ ಸರ್ಕಾರ ಪಂಚಮಸಾಲಿಗಳ ಪರ ಇಲ್ಲ ಅನ್ನೋದನ್ನ ಎತ್ತಿ ತೋರಿಸಿದೆ.
ಹೇಗೂ ಯತ್ನಾಳ್ ಎಷ್ಟೇ ವಿಜಯೇಂದ್ರ ವಿರುದ್ಧ ಬಂಡೇದ್ದರೂ ವರಿಷ್ಠರು ಮಾತ್ರ ಏನೂ ಮಾಡದ ಸ್ಥಿತಿಯಲ್ಲಿ ಇದ್ದಾರೆ ಅನ್ನೋದು ಮತ್ತೆಮತ್ತೆ ಸಾಬೀತಾಗಿದೆ.ಅತ್ತ ಪಕ್ಷಕ್ಕೂ ಸೈ ಆಗಿ ಪಂಚಮಸಾಲಿ ತಮ್ಮ ಪರವಿದೆ ಎಂಬುದನ್ನು ಯತ್ನಾಳ್ ಎತ್ತಿ ತೋರಿಸಿದ್ದಾರೆ. ವಿಜಯೇಂದ್ರನಿಗಿಂತ ತಾನೇ ಸ್ಟ್ರಾಂಗೂ ಹೋರಾಟಕ್ಕೂ ಸೈ ಹಾರಾಟಕ್ಕೂ ಸೈ ಅಂತಾ ಯತ್ನಾಳ್ ಸಾಬೀತು ಪಡಿಸಿ ಎರಡು ಹಕ್ಕಿಯನ್ನ ಒಂದೇ ಕಲ್ಲಿನಲ್ಲಿ ಹೊಡೆದಿರೋದು ಮಾತ್ರ ರಾಜಕೀಯ.