‘ಪುಷ್ಪ 2’ ಸಿನಿಮಾ ವಿವಾದ ಸೃಷ್ಟಿ ಮಾಡಿದ್ದು ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ. ಇಲ್ಲಿ ‘ಪುಷ್ಪ 2’ ಸಿನಿಮಾ ನೋಡಲು ಅಲ್ಲು ಅರ್ಜುನ್ ಬಂದಾಗ ಕಾಲ್ತುಳಿತ ಉಂಟಾಯಿತು. ಹೀಗಾಗಿ, ಮಹಿಳೆ ಮೃತಪಟ್ಟಳು. ಇದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಇದಕ್ಕೆ ಅಲ್ಲು ಅರ್ಜುನ್ ಕೂಡ ಕಾರಣ ಎಂದು ಅವರನ್ನು ಬಂಧಿಸಲಾಯಿತು. ಈಗ ಇದೇ ಥಿಯೇಟರ್ನಲ್ಲಿ ಸಿನಿಮಾ ದಾಖಲೆ ಬರೆದಿದೆ.
ಈ ಸಿನಿಮಾ ಸಂಧ್ಯಾ ಥಿಯೇಟರ್ನಲ್ಲಿ 1.59 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ. ಒಂದು ತಿಂಗಳಲ್ಲಿ ಈ ಥಿಯೇಟರ್ನಲ್ಲಿ ಇಷ್ಟು ದೊಡ್ಡ ಮಟ್ಟದ ಗಳಿಕೆ ಆಗಿದ್ದು ಇದೇ ಮೊದಲು. 2001ರಲ್ಲಿ ಪವನ್ ಕಲ್ಯಾಣ್ ನಟನೆಯ ‘ಖುಷಿ’ ಚಿತ್ರ 1.53 ಕೋಟಿ ರೂಪಾಯಿ ಗಳಿಸಿ ದಾಖಲೆಯನ್ನು ತನ್ನ ಹೆಸರಲ್ಲಿ ಇಟ್ಟುಕೊಂಡಿತ್ತು.


