ಕಲಬುರ್ಗಿಯಲ್ಲಿ ನಡೆದ ಬಿಎಡ್ ಪರೀಕ್ಷೆ ಅಕ್ರಮ ದಿನಕ್ಕೊಂದು ತಿರುವು ಪಡೆಯುತ್ತಿದೆ.ಗುಲ್ಬರ್ಗ ವಿವಿ ಕುಲಪತಿಗೆ ಪರೀಕ್ಷಾ ಕೇಂದ್ರದ ಮಾಹಿತಿ ಕೊರತೆ ಇತ್ತಾ ಅನ್ನೋ ಪ್ರಶ್ನೆ ಮೂಡುತ್ತಿದೆ.ಅಲ್ ಬದರ್ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ಇತ್ತು ಎಂದು ಮೌಲ್ಯ ಮಾಪನಾ ಕುಲ ಸಚಿವೆ ಮೇಧಾವಿನಿ ಕಟ್ಟಿ ಹೇಳಿದರೆ,ಗುಲ್ಬರ್ಗ ವಿವಿ ಕುಲಪತಿ ದಯಾನಂದ ಅಗಸರ ನಗರದ ಎನ್ ವಿ ಕಾಲೇಜಿನಲ್ಲಿ 22 ಬಿಎಡ್ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಮತಿ ನೀಡಿತ್ತು.ಜುಲೈ 1 ರಿಂದ 7 ರ ವರೆಗೂ ನಡೆದಿದ್ದ ಬಿಎಡ್ ಪ್ರಥಮ ಹಾಗೂ ತೃತೀಯ ಪರೀಕ್ಷೆ ನಡೆದಿದ್ದವು.ಅಲ್ ಬದರ್ ಕಾಲೇಜು ಸೆಂಟರ್ ನಲ್ಲಿ ಇಂದಿರಾ ಗಾಂಧಿ ಬಿಎಡ್ ಕಾಲೇಜಿನ ವಿದ್ಯಾರ್ಥಿಗಳ ಬದಲಿಗೆ 100 ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರಿಸಿದ ಆರೋಪ ಕೇಳಿ ಬಂದಿದೆ.22 ವಿದ್ಯಾರ್ಥಿಗಳಿಗೆ ನಗರದ ನೂತನ ವಿದ್ಯಾಲಯದಲ್ಲಿ ಪರೀಕ್ಷೆ ಬರಿಬೇಕಿತ್ತು.ಆದ್ರೆ ಬರೆದಿದ್ದಾರಾ ಇಲ್ವಾ ಅಂತ ಕೂಡ ಗುಲಬರ್ಗಾ ವಿವಿ ಕುಲಪತಿಗೆ ಗೊತ್ತಿಲ್ಲ ಎನ್ನೋದು ವಿಪರ್ಯಾಸ.ಕುಲಪತಿ ಒಂದು ಹೇಳಿಕೆ ನೀಡುತ್ತಿದ್ದಾರೆ.ಕುಲ ಸಚಿವರು ಒಂದು ಹೇಳಿಕೆ ನೀಡುತ್ತಿದ್ದಾರೆ.ಪರೀಕ್ಷೆ ಜುಲೈ 4 ರಂದು ಕಲ ಸಚಿವೆ ಮೇಧಾವಿನಿ ಕಟ್ಟಿ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದರು.ಕೋರ್ಟ್ ನೂತನ ವಿದ್ಯಾಲಯದಲ್ಲಿ ಪರೀಕ್ಷೆಗೆ ಅನುಮತಿ ನೀಡಿದೆ ಆದ್ರೆ ಕುಲ ಸಚಿವರು ಅಲ್ ಬದರ್ ಸೆಂಟರ್ ಗೆ ಯಾಕೆ ಹೋಗಿದ್ದರು ಅನ್ನೋ ಪ್ರಶ್ನೆ ಮೂಡುತ್ತಿದೆ.ಇಷ್ಟೇಲ ಆರೋಪ ಇದ್ರು ಕುಲ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕುಲಪತಿಗಳ ವಿರುದ್ಧ ಕೂಡ ಅನುಮಾನ ಮೂಡಿಸುತ್ತಿದೆ.ರಾಜ್ಯ ಪಾಲರು ಹಾಗೂ ಉನ್ನತ ಶಿಕ್ಷಣ ಸಚಿವರು ಇದರ ಬಗ್ಗೆ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.