ಕಾಂತಾರ ಬೆಡಗಿ ಸಪ್ತಮಿ ಗೌಡ ಹೋಟೆಲ್ ಒಂದರಲ್ಲಿ ದೋಸೆ ಮಾಡುತ್ತಿರುವ ವಿಡಿಯೋ ಎಲ್ಲೆಡೆ ಈಗ ಸಖತ್ ವೈರಲ್ ಆಗಿದೆ.ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡಗೆ ಬೇರೆ ಬೇರೆ ಭಾಷೆಗಳಿಂದಲೂ ಡಿಮಾಂಡ್ ಹೆಚ್ಚಾಗಿದೆ. ‘ಕಾಂತಾರ’ ಚಿತ್ರದ ನಂತರ ತೆಲುಗು, ಹಿಂದಿ ಚಿತ್ರರಂಗಕ್ಕೂ ಹೋಗಿ ಬಂದಿರುವ ಈ ನಟಿ, ಸದ್ಯ ಕನ್ನಡದಲ್ಲಿ ಸತೀಶ್ ನೀನಾಸಂ ಜೊತೆಗೆ ‘ದಿ ರೈಸ್ ಆಫ್ ಅಶೋಕ’ ಹಾಗೂ ಡಾಲಿ ಧನಂಜಯ ಜೊತೆಗೆ ‘ಹಲಗಲಿ’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ನಟನೆಯ ‘ದಿ ರೈಸ್ ಆಫ್ ಅಶೋಕ’ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ‘ಹಲಗಲಿ’ ಶೂಟಿಂಗ್ ಕಂಪ್ಲೀಟ್ ಆಗಿದೆ.
ಹೋಟೆಲ್ ನಲ್ಲಿ ಬಿಸಿ ಬಿಸಿ ದೋಸೆ ಮಾಡಿದ ನಟಿ..
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇದ್ರು ಸಪ್ತಮಿ ಹೋಟೆಲ್ ಒಂದರಲ್ಲಿ ದೋಸೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋ ಸಖತ್ ವೈರಲ್ ಆಗಿದೆ. ಮೀನಾಕ್ಷಿ ಕಾಫಿ ಬಾರ್ನಲ್ಲಿ ಸಖತ್ ಸ್ಟೈಲ್ ಆಗಿ ಸಪ್ತಮಿ ದೋಸೆ ಹಾಕ್ತಿರೋದನ್ನ ನೋಡಿ.. ಎಷ್ಟು ಸೊಗಸಾಗಿ ದೋಸೆ ಹುಯ್ತಿದ್ದಾರೆ. ಇನ್ನೂ ಹಿಂದೆ ಇದ್ದ ಜನ ದೂಸೆ ಬಿಟ್ಟು ಸಪ್ತಮಿ ಅವರನ್ನೇ ನೋಡ್ತಾ ಹೊಟ್ಟೆ ತುಂಬುಸ್ಕೊತ್ತಿದ್ದಾರೆ.ಇನ್ನೂ ಈ ದೋಸೆಗಂತೂ ಸಖತ್ ಡಿಮ್ಯಾಂಡ್ ಬಂದು ಸಪ್ತಮಿ ಮಾಡಿದ್ ದೋಸೆ ನಂಗ್ ಬೇಕು ನಂಗ್ ಬೇಕು ಅಂತ ಜನ ಕಿತ್ತಾಡ್ತಿದ್ರಂತೆ.
ಇನ್ನೂ ಸೋಶಿಯಲ್ ಮೀಡಿಯಾಲ್ಲಿ ನಟಿ ಸಪ್ತಮಿ ಅವರ ವಿಡಿಯೋ ನೋಡಿ, ಓ ಇನ್ನೊಬ್ರು ಸೆಲಬ್ರೆಟಿ ಹೋಟೆಲ್ ಉದ್ಯಮ ಶುರು ಮಾಡ್ಕೊಂಡ್ರಾ ಅಂತ ಕಾಮೆಂಟ್ ಮಾಡುದ್ರೆ, ಇನ್ನೂ ಕೆಲವರು ಆಕ್ಟಿಂಗ್ ಬಿಟ್ಟು ಹೋಟೆಲ್ನಲ್ಲಿ ದೂಸೆ ಹಾಕೋಕೆ ಶುರುಮಾಡುದ್ರಾ ಅಂತ ಕಾಮೆಂಟ್ ಮಾಡ್ತಿದ್ದಾರೆ. ಮತ್ತೆ ಕೆಲವರು ಪಾಪ ಅವರು ಎಷ್ಟೇ ತಿರುಗಿಸಿದ್ರೂ ದೋಸೆ ದೊಡ್ಡನೇ ಆಗ್ತಿಲ್ಲ ಎಂದು ಸಪ್ತಮಿಯವರ ಕಾಲು ಎಳೆಯುತ್ತಿದ್ದಾರೆ..
ಇನ್ನೂ ಸೆಲಬ್ರೆಟೀಸ್ ಗಳಿಗೆ ಎಷ್ಟು ಸಂಭಾವನೆ ಬರುತ್ತೆ ಅನ್ನೋದನ್ನ ತಿಳಿದುಕೊಳ್ಳುವ ಕುತೂಹಲ ಇರುತ್ತೆ. ಹಂಗೆ ಎಲ್ಲರೂ ಸಪ್ತಮಿಗೆ ಸಂಭಾವನೆಯ ವಿಷಯದ ಕುರಿತು ಪ್ರಶ್ನೆಗಳನ್ನ ಕೇಳಿದ್ದಾರೆ. ಸಾಮಾನ್ಯವಾಗಿ ಚಿತ್ರ ತಾರೆಯರು ಒಂದು ಹಿಟ್ ಚಿತ್ರ ಕೊಟ್ಟರೆ, ಅವರ ಸಂಭಾವನೆ ಕೂಡ ಹೆಚ್ಚಾಗುತ್ತದೆ. ಅಂತರೆ, ಕಾಂತಾರದ ಯಶಸ್ಸಿನ ಬಳಿಕ ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟು ಪಟ್ಟು ಜಾಸ್ತಿ ಆಗಿದ್ಯಾ ಎಂಬ ಪ್ರಶ್ನೆಯನ್ನು ನಟಿಯ ಮುಂದಿಟ್ಟಾಗ, ಕಾಂತಾರ ಚಿತ್ರದ ಪ್ರೊಡಕ್ಷನ್ ಮಾಡಿದವರೇ ಎರಡನೆಯ ಚಿತ್ರದ ಪ್ರೊಡಕ್ಷನ್ ಕೂಡ ಮಾಡಿದ್ರು. ಸೋ ನಾನು ಮೊದಲ ಚಿತ್ರಕ್ಕೂ ಪೇಮೆಂಟ್ ಕೇಳಿರಲಿಲ್ಲ, ಎರಡನೆಯ ಚಿತ್ರಕ್ಕೂ ಕೇಳಿಲ್ಲ ಎಂದಿದ್ದರು.
ಆದರೆ, ಅವರಾಗಿಯೇ 7-8 ಪಟ್ಟು ಜಾಸ್ತಿ ಸಂಭಾವನೆ ಕೊಟ್ಟರು ಎಂದು ಸಪ್ತಮಿ ರಿವೀಲ್ ಮಾಡಿದ್ದಾರೆ. ಆದರೆ ಎಷ್ಟು ಎನ್ನುವ ಬಗ್ಗೆ ರಿವೀಲ್ ಮಾಡಿಲ್ಲ. ಕಾಂತಾರದಲ್ಲಿ ನಾನು ಒಂದೂವರೆ ಕೋಟಿ ರೂಪಾಯಿ ಸಂಭಾವನೆ ಪಡೆದೆ ಎಂದು ದೊಡ್ಡ ಮ್ಯಾಗಜೀನ್ ಒಂದರಲ್ಲಿ ಪ್ರಕಟವಾಯ್ತು. ಅದನ್ನು ನೋಡಿ ನನಗೆ ತುಂಬಾ ಖುಷಿಯಾಯ್ತು. ಮುಂದೆ ಇಷ್ಟು ದುಡ್ಡು ಪಡೆಯುವ ಹಾಗೆ ಆಗಲಿ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ ಅಂತ ಹೇಳಿದ್ದಾರೆ. ಎನಿವೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಸಪ್ತಮಿಗೆ ಇನ್ನೂ ಜಾಸ್ತಿ ಸಂಭಾವನೆ ಬರಲಿ ಎನ್ನಷ್ಟು ಎತ್ತರಕ್ಕೆ ಬೆಳಿಲಿ ಅಂತ ವಿಷ್ ಮಾಡೋಣ.