#Exclusive NewsTop Newsಜಿಲ್ಲೆಸುದ್ದಿ

ಧಾರವಾಡ : ಅಡ್ಡ ಬಂದ ನಾಯಿಯನ್ನು ರಕ್ಷಿಸಲು ಹೋಗಿ ಓಮಿನಿ ಕಾರ್ ಮರಕ್ಕೆ ಡಿಕ್ಕಿ..!

  • ಚಾಲಕನ ನಿಯಂತ್ರಣ ತಪ್ಪಿ ಓಮಿನಿ ಕಾರ್ ಮರಕ್ಕೆ ಡಿಕ್ಕಿ..!
  • ಅಡ್ಡ ಬಂದ ನಾಯಿಯನ್ನು ರಕ್ಷಿಸಲು ಹೋಗಿ ಅಪಘಾತ..!
  • ಚಾಲಕ ಸೇರಿ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ..!
  • ಧಾರವಾಡ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ..

 

ಧಾರವಾಡ : ಓಮಿನಿ ಕಾರ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಇನ್ನೋರ್ವನಿಗೆ ಸಣ್ಣ ಪುಟ್ಟ ಗಾಯವಾದ ಘಟನೆ ಧಾರವಾಡದ ಆಕಾಶವಾಣಿ ಬಳಿ ನಡೆದಿದೆ.ವೇಗವಾಗಿ ಚಲಿಸುತ್ತಿದ್ದ ಓಮಿನಿ ಕಾರ್ ರಸ್ತೆಯಲ್ಲಿ ಅಡ್ಡ ಬಂದ ನಾಯಿಯೊಂದನ್ನು ರಕ್ಷಿಸಲು‌ ಮುಂದಾದ ವೇಳೆ ಕಾರ್ ಚಾಲಕನ ನಿಯಂತ್ರಣ ತಪ್ಪಿದೆ.

https://youtu.be/hIN0TI1xkiU

ಇದರಿಂದಾಗಿ ಕಾರ್ ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಓಮಿನಿ ಕಾರಿನ ಚಾಲಕ ಹಾಗೂ ಮತ್ತೊಬ್ಬನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಕೂಡಲೇ ಸ್ಥಳೀಯರು ಸೇರಿ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಓಮಿನಿ ಕಾರ್ ಮುಂಭಾಗ ಜಖಂ ಆಗಿದೆ, ಧಾರವಾಡ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Comments (0)

Your email address will not be published. Required fields are marked *

Back to top button