Dharwad; ಸರ್ಕಾರಿ ಕಚೇರಿ ಅಂದರೆ ಸ್ವಚ್ಚತೆಗೆ ಮಾದರಿಯಾಗಿರಬೇಕು. ಆದರೆ ಇಲ್ಲೊಂದು ಸರ್ಕಾರಿ ಹತ್ತಾರು ಕಚೇರಿಯನ್ನು ಒಂದೇ ಕಟ್ಟಡದಲ್ಲಿ ಹೊಂದಿರುವ ಮಿನಿ ವಿಧಾನ ಸೌಧ ದುರ್ವಾಸನೆಯ ಸೌಧವಾಗಿ ಬದಲಾಗಿದೆ. ಹೌದು ಅಚ್ಚರಿ ಆದರೂ ಕೂಡಾ ಇದೂ ನೀಜ. ಧಾರವಾಡ ಮಿನಿ ವಿಧಾನಸೌಧದಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ.
ಕಳೆದ ಒಂದು ತಿಂಗಳಿಂದ ಮಿನಿ ವಿಧಾನಸೌಧದ ಆವರಣದಲ್ಲಿ ಚರಂಡಿ ನೀರು ಓವರ ಪ್ಲೋ ಆಗುತ್ತಿದ್ದು, ಜನತೆ ಈ ವಾಸನೆಯಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಕ್ಕಳು ಸೇರಿದಂತೆ ವೃದ್ಧರೊಂದಿಗೆ ಹತ್ತಾರು ಕೆಲಸ ಕಾರ್ಯಗಳಿಗೆ ಇಲ್ಲಿಗೆ ಬರುವ ಜನರಿಗೆ ದುರ್ವಾಸನೆಯೇ ಸ್ವಾಗತ ಕೋರುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಮಿನಿ ವಿಧಾನಸೌಧ ಮುಂಭಾಗದಲ್ಲಿಯೇ ಚರಂಡಿ ನೀರು ತುಂಬಿ ಹೊರ ಬರುತ್ತಿದ್ದರು, ಮಾಹಾನಗರ ಪಾಲಿಕೆಯ ಅಧಿಕಾರಿಗಳಾಗಲ್ಲಿ ಅಥವಾ ಮಿನಿ ವಿಧಾನ ಸೌಧದ ಕಚೇರಿಯಲ್ಲಿನ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗದೆ ಇರುವುದು ಸಾರ್ವಜನಿಕರ ಹಿಡಿಶಾಪಕ್ಕೆ ಕಾರಣವಾಗಿದೆ.

ಇದೇ ಆವರಣದಲ್ಲಿ ಇಂದಿರಾ ಕ್ಯಾಂಟೀನ ಇದ್ದು, ಇಲ್ಲಿ ಉಪಹಾರ ಊಟ ಮಾಡುವ ಜನರು ಸೇರಿದಂತೆ ವಿದ್ಯಾರ್ಥಿಗಳಿಗೆ ದುರ್ವಾಸನೆ ಕಿರಿಕಿರಿ ಉಂಟು ಮಾಡುತ್ತಿದೆ. ಆವರಣದಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳವ ಆಸನದ ವ್ಯವಸ್ಥೆ, ಹೊರ ಶೌಚಾಲಯ ಹಾಗೂ ಸ್ವಚ್ಚತೆ ಇಲ್ಲದೆ ಬೆಳೆದು ನಿಂತ ಗೀಡಗಂಟೆಗಳಿಂದ ಇಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ. ಇಂದಿರಾ ಕ್ಯಾಂಟೀನ ಕಿಚ್ಚನ ವೇಸ್ಟ್ ವಾಟರ್ ಕೂಡಾ ಕಾಲುವೆ ಬೀಡಲಾಗುತ್ತಿದ್ದು, ಇದರ ವಾಸನೆಯಿಂದಾಗ್ಯೂ ಕೂಡಾ ಜನತೆ ತೊಂದರೆಯಾಗುತ್ತಿದೆ. ಇನ್ನಾದರೂ ಇಲ್ಲಿಯ ಅಧಿಕಾರಿಗಳು ಹಾಗೂ ಪಾಲಿಕೆಯ ಅಧಿಕಾರಿಗಳು ದುರ್ವಾಸನೆಗೆ ಮುಕ್ತಿ ನೀಡಿ, ಪಬ್ಲಿಕ್ ಪ್ರೆಂಡ್ಲಿ ವಾತವರಣ ನಿರ್ಮಿಸುತ್ತಾರೋ ಕಾದು ನೋಡಬೇಕಾಗಿದೆ.