ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ಮಾಡಲು ಎಸ್ಐಟಿ ಮುಖ್ಯಸ್ಥರನ್ನಾಗಿ ಪ್ರಣವ್ ಮೊಹಂತಿ ಅವರನ್ನು ನೇಮಕ ಮಾಡಿದ ರಾಜ್ಯ ಸರ್ಕಾರದ ನಡೆಯನ್ನು ಮಾಜಿ ಡಿವೈಎಸ್‌ಪಿ ಅನುಪಮಾ ಶಣೈ ಆಕ್ಷೇಪಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಪ್ರಣವ್ ಮೊಹಂತಿ ಅವರು ಸರ್ಕಾರ ಪ್ರಣವ್ ಮೊಹಂತಿರನ್ನ ನೇಮಕ ಮಾಡಿದ್ದು ಸರಿ ಇಲ್ಲ.. ಅತ್ಯಾಚಾರ ಮತ್ತು ನರಹತ್ಯೆ ಕುರಿತಾದ ತನಿಖೆಗೆ ಸೂಕ್ತ ವ್ಯಕ್ತಿಯಲ್ಲ. ಮೊಹಂತಿ ನೇಮಕದಲ್ಲಿ ಸಚಿವ ಕೆ.ಜೆ.ಚಾರ್ಜ್ ಕೈವಾಡವಿದೆ.ಹೀಗಂತ ಕೆಲ ಪೊಲೀಸರು ಹೇಳುತ್ತಿದ್ದಾರೆ ಎಂದು ಮಾಜಿ ಡಿವೈಎಸ್‌ಪಿ ಅನುಪಮಾ ಶಣೈ ಆರೋಪಿಸಿದ್ದಾರೆ. ಮೊಹಂತಿ ನೇಮಕದಿಂದ ಪೊಲೀಸರ ನೈತಿಕ ಬಲ ಕುಗ್ಗಿದೆ ಎಂದು ಕಿಡಿಕಾರಿದ್ರು.
ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಹಿರಿಯ ಐಪಿಎಸ್ ಅಧಿಕಾರಿ ಎಎಂ ಪ್ರಸಾದ್ , ಪ್ರಣವ್ ಹೆಸರು ಉಲ್ಲೇಖಿಸಿದ್ರು. ಮೊಹಂತಿ ಜಾಗದಲ್ಲಿ ದಯಾನಂದ್, ಡಿಜಿಪಿ ಡಾ.ಕೆ.ರಾಮಚಂದ್ರಾವ್ ನೇಮಕ ಮಾಡಬೇಕಾಗಿತ್ತು ಎಂದು ಆಗ್ರಹಿಸಿದ್ರು.